ತಮ್ಮ ನಿರ್ದೇಶನದ ಚಿತ್ರಗಳ ಹೆಸರುಗಳ ಮೂಲಕ ಗಮನ ಸೆಳೆದ ನಿರ್ದೇಶಕ ಶ್ರೀನಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಹೊಸ ಚಿತ್ರ ‘ಘೋಸ್ಟ್’. ಶಿವರಾಜಕುವಾರ್ ಕೇಂದ್ರ ಪಾತ್ರದ ಈ ಚಿತ್ರವನ್ನು ಸಂದೇಶ್ ನಾಗರಾಜ್ ಅವರ ಸಂದೇಶ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದೆ. ಈಗಾಗಲೇ ಬೆಂಗಳೂರಿನ ಮಿನರ್ವ ಮಿಲ್ ನಲ್ಲಿ, ಮೋಹನ್ ಬಿ ಕೆರೆ ಕಲಾ ನಿರ್ದೇಶನದಲ್ಲಿ ಅದ್ಧೂರಿಾಂಗಿ ನಿರ್ಮಿಸಲಾಗಿರುವ ಹದಿನೈದಕ್ಕೂ ಹೆಚ್ಚು ಸೆಟ್ ಗಳಲ್ಲಿ ೨೮ ದಿನಗಳ ಚಿತ್ರೀಕರಣ ನಡೆದು ಮೊದಲ ಹಂತ ಪೂರೈಸಿರುವುದಾಗಿ ಚಿತ್ರತಂಡ ಹೇಳಿದೆ. ಶಿವರಾಜಕುವಾರ್ ಅವರೊಂದಿಗೆ ಈ ಹಂತದಲ್ಲಿ, ಜುಂರಾಮ್, ಸತ್ಯಪ್ರಕಾಶ್, ಪ್ರಶಾಂತ್ ನಾರಾುಂಣನ್ ಮುಂತಾದ ಕಲಾವಿದರು ಭಾಗವಹಿಸಿದ್ದರು. ದ್ವಿತೀುಂ ಹಂತದ ಚಿತ್ರೀಕರಣ ಡಿಸೆಂಬರ್ ನಲ್ಲಿ ಮೈಸೂರಿನಲ್ಲಿ ಆರಂಭವಾಗಲಿದೆ. ವಾಸ್ತಿ ಹಾಗೂ ಪ್ರಸನ್ನ ಸಂಭಾಷಣೆ, ಅರ್ಜುನ್ ಜನ್ಯ ಸಂಗೀತ ಸಂೋಂಜನೆ, ಮಹೇಂದ್ರ ಸಿಂಹ ಛಾಾಂಗ್ರಹಣ ಚಿತ್ರಕ್ಕಿದೆ.