Mysore
26
haze

Social Media

ಶನಿವಾರ, 20 ಡಿಸೆಂಬರ್ 2025
Light
Dark

ಮುಪ್ಪಿಗೆ ಲವಲವಿಕೆಯೇ ಚೈತನ್ಯ

‘ವಯಸ್ಸಾಯಿತು’ ಎನ್ನುವ ಮಾತು ಸಹಜವಾಗಿ ಹೋಗಿದೆ. ವಯಸ್ಸಾದಂತೆ ಕ್ರಿಯೆಗೆ ಪ್ರತಿಕ್ರಿಯಿಸುವ ಶಕ್ತಿಯನ್ನು ದೇಹ ಕಳೆದುಕೊಳ್ಳುತ್ತಾ ಹೋಗುತ್ತದೆ.
ಕೆಲವರು ಮುಪ್ಪಿನ ಲಕ್ಷಣಗಳಲ್ಲಿ ಇದೂ ಒಂದು ಎನ್ನುತ್ತಾರೆ. ಇದಕ್ಕೆ ವಯೋ ಸಹಜವಾದ ಸಮಸ್ಯೆಗಳೇ ಕಾರಣ. ಜೀವನದಲ್ಲಿ ಉತ್ಸಾಹವೇ ಇರದಿದ್ದರೆ, ಬದುಕು ನೀರಸವೆನಿಸುತ್ತದೆ. ಹಾಗಾದರೆ ಜೀವ ಚೈತನ್ಯ, ಲವಲವಿಕೆಯನ್ನು ಕಾಪಾಡಿಕೊಳ್ಳುವ ಬಗೆ ಹೇಗೆ? ಸಾಧ್ಯವಾದಷ್ಟು ದೈಹಿಕ ಚಟುವಟಿಕೆಗಳನ್ನು ಮಾಡುವುದರಿಂದ ದೇಹ ನಿರೋಧಕ ವ್ಯವಸ್ಥೆ ಇನ್ನಷ್ಟು ಚೈತನ್ಯಶಾಲಿಯಾಗುತ್ತದೆ. ನಿಯಮಿತವಾಗಿ ವ್ಯಾಯಾಮವನ್ನು ಮಾಡುವುದು ಒಳ್ಳೆಯದು ಎಂದು ಅನೇಕ ಸಮೀಕ್ಷೆಗಳು ವರದಿ ನೀಡಿವೆ.

ಬೆಳಗಿನ ವೇಳೆ ನಡಿಗೆ, ಕುಳಿತುಕೊಂಡು ಮಾಡುವ ಸುಲಭ ಆಸನಗಳು ಇನ್ನೂ ಹಲವು ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಷ್ಟೂ ದೇಹ ಕ್ರಿಯಾಶೀಲವಾಗಿರುತ್ತದೆ. ಹವ್ಯಾಸಗಳಿಗಾಗಿ ಒಂದಷ್ಟು ಸಮಯವನ್ನು ಮೀಸಲಿಡುವುದು ಸಹಕಾರಿ. ಅಂತೆಯೇ, ಇತರರೊಂದಿಗೆ ಬೆರೆತು, ಸಂತೋಷದ
ಕ್ಷಣಗಳನ್ನು ಕಾಪಾಡಿಕೊಳ್ಳುವುದು ಎಂದಿಗೂ ಮುಖ್ಯವಾದದ್ದು. ನೀವು ಗಮನಿಸಿರಬಹುದು, 80ರ ಆಸುಪಾಸಿನ ಅಜ್ಜನೋ ಅಜ್ಜಿಯೋ ಹೊಲದಲ್ಲಿ
ಕೆಲಸ ಮಾಡುತ್ತಿರುವುದು, ಸೊಪ್ಪು ಮಾರುತ್ತಿರುವುದು, ಉಣ್ಣೆಯ ಬಟ್ಟೆಗಳನ್ನು ನೇಯುತ್ತಿರುವುದು, ಹೂ ಕಟ್ಟುತ್ತಿರುವುದು ಹೀಗೆ ಹುಡುಕುತ್ತಾ ಹೋದರೆ ಸಾವಿರಾರು ದೃಶ್ಯಗಳು ನಮ್ಮ ಸುತ್ತಲೇ ಇವೆ.

 

Tags:
error: Content is protected !!