Mysore
24
haze

Social Media

ಭಾನುವಾರ, 28 ಡಿಸೆಂಬರ್ 2025
Light
Dark

ಸರ್ವ ಕೀಟಕ್ಕೂ ಮದ್ದು ʻಪೂಚಿ ಮರುಂದುʼ

ಜಿ.ಕೃಷ್ಣ ಪ್ರಸಾದ್‌

ಚೆಲ್ಲಮುತ್ತು ತಮಿಳು ನಾಡಿನ ಈರೋಡಿನ ಕೃಷಿ ಕಾರ್ಮಿಕ. ಇವರದು ತನ್ನ ಊರಿನ ಭತ್ತದ ಗದ್ದೆಗಳನ್ನು ಗುತ್ತಿಗೆ ಹಿಡಿದು, ರಾಸಾ ಯನಿಕ ಔಷಧಿ ಸಿಂಪಡಿಸುವ ಕಾಯಕ. ರಾಸಾಯನಿಕ ಔಷಽಗಳ ಒಡನಾಟ ದಿಂದಾಗಿ ಸದಾ ಸುಸ್ತು, ವಾಂತಿ, ಕಣ್ಣುರಿ. ಇದಕ್ಕೆ ಚಿಕಿತ್ಸೆಗೆಂದು ವೈದ್ಯರಲ್ಲಿಗೆ ಹೋಗುವುದು ಮಾಮೂಲಿಯಾಗಿತ್ತು. ಇವರಿಗೆ ಚಿಕಿತ್ಸೆ ಕೊಟ್ಟೂ ಕೊಟ್ಟೂ ಬೇಸರ ಬಂದ ಆ ಡಾಕ್ಟರ್ ‘ಏನಯ್ಯಾ ಇದು. ಹೀಗೇ ಆದರೆ ಜೀವಕ್ಕೆ ತೊಂದರೆಯಾದೀತ್ತು. ರಾಸಾಯನಿಕ ಔಷಽ ಬದಲು ಆಯುರ್ವೇದ ಔಷಧಿನಾದ್ರೂ ಹೊಡಿಬಾರ್ದ’ ಎಂದರು. ಒಂದಷ್ಟು ಗಿಡಮೂಲಿಕೆಗಳ ಹೆಸರು ಹೇಳಿ ಅದರಿಂದ ಔಷಧಿ ಮಾಡಿಕೊಳ್ಳಲು ಹೇಳಿದರು.

ಚೆಲ್ಲಮುತ್ತುಗೆ ಬುದ್ಧಿಮಾತು ಹೇಳಿದ ವೈದ್ಯ ನಟರಾಜನ್. ಸಾವಯವ ಕೃಷಿ ಚಳವಳಿಯ ಜೊತೆ ಒಡನಾಟವಿದ್ದವರು. ಪಂಚಗವ್ಯ ವಿಧಾನವನ್ನು ಜನಪ್ರಿಯ ಮಾಡಿದವರು. ವೈದ್ಯರ ಮಾತು ಚೆಲ್ಲಮುತ್ತುವಿಗೂ ಸರಿ ಅನಿಸಿತು. ವೈದ್ಯರ ಮಾರ್ಗದರ್ಶನದಂತೆ ವಿವಿಧ ಕಹಿ ಗುಣದ ಸೊಪ್ಪುಗಳನ್ನು ಸೇರಿಸಿ ‘ಪೂಚಿ ಮರುಂದು’ ಔಷಽ ತಯಾರಿಸಿದರು. ಕಡಿಮೆ ಖರ್ಚಿನಲ್ಲಿ ಎಲ್ಲಾ ತರಹದ ಕೀಟಗಳನ್ನು ನಿಯಂತ್ರಣ ಮಾಡುವ ಶಕ್ತಿ ಪೂಚಿ ಮರುಂದು ಔಷಽಗಿತ್ತು. ಪೂಚಿ ಮರುಂದು ತಮಿಳುನಾಡಿನಲ್ಲಿ ಬಹು ಬೇಗ ಜನಪ್ರಿಯ ವಾಯಿತು. ಈ ಸಂಶೋಧನೆಗಾಗಿ ಚೆಲ್ಲಮುತ್ತು ರವರಿಗೆ ರಾಷ್ಟ್ರಪ್ರಶಸ್ತಿ ಲಭಿಸಿತು.

ಕರ್ನಾಟಕದಲ್ಲೂ ಪೂಚಿ ಮರುಂದು
ಎರಡು ದಶಕಗಳ ಮುನ್ನ ಕರ್ನಾಟಕದಲ್ಲಿ ತೆಂಗಿನ ನುಸಿ ರೋಗ ಅವಾಂತರಿಕಾರಿಯಾಗಿದ್ದಾಗ ‘ಸಹಜ ಸಮೃದ್ಧ’ ಸಾವಯವ ಕೃಷಿಕರ ಬಳಗವು ಚೆಲ್ಲಮುತ್ತುರವರನ್ನು ಕರ್ನಾಟಕಕ್ಕೆ ಕರೆಸಿ ಪೂಚಿ ಮರುಂದು ಔಷಽ ಪರಿಚಯಿಸಿತು. ನಂತರದ ವರ್ಷಗಳಲ್ಲಿ ಕರ್ನಾಟಕದ ನೂರಾರು ರೈತರು ಪೂಚಿ ಮರುಂದು ಸಸ್ಯಮೂಲ ಕೀಟನಾಶಕವನ್ನು ಬಳಸಿ ಯಶಸ್ವಿಯಾಗಿದ್ದಾರೆ. ಪೂಚಿ ಮರುಂದು ತಮಿಳು ಪದ. ‘ಪೂಚಿ’ ಎಂದರೆ ಕೀಟ. ‘ಮರುಂದು’ ಎಂದರೆ ‘ಔಷಽ’. ಅರ್ಥಾತ್ ಕೀಟನಾಶಕ. ಏಳು ಬಗೆಯ ಸಸ್ಯಮೂಲಗಳನ್ನು ಬಳಸಿ ತಯಾರಿಸುವ ‘ಪೂಚಿ ಮರುಂದು’ ಎಲ್ಲ ಬಗೆಯ ಕೀಟಗಳನ್ನೂ ನಿಯಂತ್ರಿಸುತ್ತದೆ. ಹಾಗಾಗಿಯೇ ಇದನ್ನು Bran spectrum biopeaticide ಎಂದು ಕರೆಯುತ್ತಾರೆ.

ಪೂಚಿ ಮರುಂದು ಔಷಽಯ ವಿಶೇಷವೆಂದರೆ ತರಕಾರಿ ಬೆಳೆಗಳಿಗೆ ಬರುವ ಎಲ್ಲ ಬಗೆಯ ಕೀಟ ಗಳನ್ನು ನಿಯಂತ್ರಿಸುವುದಲ್ಲದೆ, ಹೂ ಉದುರು ವುದನ್ನು ತಪ್ಪಿಸುತ್ತದೆ. ತೊಗರಿ ಮತ್ತು ಅವರೆಯ ಕಾಯಿಕೊರಕ ಹುಳುಗಳನ್ನು ಪೂಚಿ ಮರುಂದು ಬಳಸುವ ಮೂಲಕ ನಿಯಂತ್ರಿಸಬಹುದಾಗಿದೆ.

ತಯಾರಿಕೆ ಮತ್ತು ಬಳಕೆ
ಅಪೂಚಿ ಮರುಂದು ತಯಾರಿಕೆ ಸುಲಭ. ೧ ಕೆಜಿ ಬೇವಿನ ಬೀಜ, ೧ ಕೆಜಿ ಹಸಿ ಶುಂಠಿ ಅಥವಾ ೧ ಕೆಜಿ ಹಸಿ ಅರಿಶಿನ, ೧ ಕೆಜಿ ಲೋಳೆ ಸರ, ೧ ಕೆಜಿ ಎಕ್ಕದ ಎಲೆ, ೧ ಕೆಜಿ ಲಕ್ಕಿ ಎಲೆ, ೧ ಕೆಜಿ ಸೀತಾಫಲದ ಎಲೆ ಮತ್ತು ೧ ಕೆಜಿ ವಿಷಮಧಾರೆ ಸೊಪ್ಪನ್ನು ಪ್ರತ್ಯೇಕವಾಗಿ ಮಿಕ್ಸಿಗೆ ಹಾಕಿ ಚಟ್ನಿ ತರ ರುಬ್ಬಿಕೊಳ್ಳಿ. ನಂತರ ಎಲ್ಲವನ್ನೂ ಪಾತ್ರೆಯೊಂದರಲ್ಲಿ ಸೇರಿಸಿ ಒಂದು ವಾರ ಎತ್ತಿಡಿ. ಪ್ರತಿ ದಿನ ದ್ರಾವಣವನ್ನು ತಿರುವಲು ಮರೆಯದಿರಿ. ವಾರದ ನಂತರ ಪೂಚಿ ಮರುಂದು ದ್ರಾವಣ ವನ್ನು ಸೋಸಿ ಎತ್ತಿಟ್ಟುಕೊಳ್ಳಿ.

ಒಂದು ಲೀಟರ್ ಪೂಚಿ ಮರುಂದು ಔಷಽಗೆ ಹತ್ತು ಲೀಟರ್ ನೀರು ಸೇರಿಸಿ ಬೆಳೆಗಳಿಗೆ ಸಿಂಪಡಿಸಿ. ‘ಕಳೆದ ಎರಡು ವರ್ಷಗಳಿಂದ ಪೂಚಿ ಮರುಂದು ಬಳಸುತ್ತಿದ್ದೇವೆ. ಒಳ್ಳೇ ರಿಸಲ್ಟ್ ಕೊಡ್ತದೆ. ತರಕಾರಿ ಬೆಳೆಗೆ ಚೆನ್ನಾಗಿ ಕೆಲಸ ಮಾಡ್ತದೆ’ ಎಂದು ಹೆಗ್ಗಡದೇವನಕೋಟೆ ಬಳಿಯ ನೂರಲಕುಪ್ಪೆಯ ರೈತ ಮಹಿಳೆ ಚಿನ್ನಮ್ಮ ಹೇಳುತ್ತಾರೆ.

ಹುಲಿಕಾಡು ರೈತ ಉತ್ಪಾದಕರ ಕಂಪೆನಿಯು ಪೂಚಿ ಮರುಂದು ಔಷಽಯನ್ನು ಉತ್ಪಾದಿಸಿ ರೈತರಿಗೆ ಹಂಚುತ್ತಿದೆ. ಪಿರಿಯಾಪಟ್ಟಣದ ಹಿಟ್ನೆ ಹೆಬ್ಬಾಗಿಲು ಮತ್ತು ಕೊಳ್ಳೇ ಗಾಲದ ಅರೇಪಾಳ್ಯ ರೈತರು ಪೂಚಿ ಮರುಂದು ಬಳಸಿ ಯಶಸ್ವಿಯಾಗಿದ್ದಾರೆ. ರಾಸಾಯನಿಕಗಳ ಬಳಕೆಯಿಂದ ಮುಕ್ತರಾಗಲು ಸಸ್ಯ ಮೂಲ ಕೀಟನಾಶಕ ಪೂಚಿ ಮರುಂದು ಉತ್ತಮ ಪರ್ಯಾಯ ಔಷಧಿಯಾಗಿದೆ.

 

Tags:
error: Content is protected !!