Mysore
24
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಮುಂಗಾರು ಕೃಷಿ ಸಮೀಕ್ಷೆ ದಾಖಲಿಸಲು ತಡಮಾಡಬೇಡಿ

agriculture mobile phone

ಕೃಷಿ ಇಲಾಖೆಯು ಪ್ರತಿ ವರ್ಷದಂತೆ ಈ ವರ್ಷ ಸಹ ಮುಂಗಾರು ಹಂಗಾಮಿನಲ್ಲಿ ರೈತರ ಜಮೀನಿನ ಬೆಳೆ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲು ಖಾಸಗಿ ಏಜೆನ್ಸಿಗಳ ಮೂಲಕ ‘ನನ್ನ ಬೆಳೆ-ನನ್ನ ಹಕ್ಕು’ ಶೀರ್ಷಿಕೆಯಡಿ ಅಪ್ಲಿಕೇಷನ್ ಆಧಾರಿತ ಬೆಳೆ ಸಮೀಕ್ಷೆಗೆ ಚಾಲನೆ ನೀಡಿದೆ.

೨೦೨೫-೨೬ನೇ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕೃಷಿ ಇಲಾಖೆಯಿಂದ ಆರಂಭವಾಗಿದ್ದು, ರಾಜ್ಯಾದ್ಯಂತ ಪ್ರತಿ ಹಳ್ಳಿಗೆ ನೇಮಕ ಮಾಡಲಾದ ಖಾಸಗಿ ಏಜೆನ್ಸಿಗಳವರು ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಮಾಹಿತಿಯನ್ನು ದಾಖಲಿಸುತ್ತಾರೆ. ಬೆಳೆ ಸಮೀಕ್ಷೆ-೨೦೨೫ ಕೃಷಿ ಇಲಾಖೆಯಿಂದ ನೇಮಕವಾದ ಖಾಸಗಿ ಏಜೆನ್ಸಿಗಳವರು ರೈತರ ಜಮೀನಿಗೆ ಭೇಟಿ ನೀಡಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಯಾವೆಲ್ಲ ಬೆಳೆಗಳನ್ನು ಬೆಳೆದಿದ್ದಾರೆ ಎನ್ನುವ ಮಾಹಿತಿಯನ್ನು ಜಿಪಿಎಸ್ ಆಧಾರಿತ ಫೋಟೋ ತೆಗೆದು ಅನ್ ಲೈನ್‌ನಲ್ಲಿ ದಾಖಲಿಸಿ ಡಿಜಿಟಲ್ ರೂಪದಲ್ಲಿ ರೈತರ ಪಹಣಿಯಲ್ಲಿ ಬೆಳೆ ಮಾಹಿತಿಯನ್ನು ನಮೂದಿಸಲು ಬೆಳೆ ಸಮೀಕ್ಷೆ ಮಾಡಲಾಗುತ್ತಿದೆ.

ಬೆಳೆ ಸಮೀಕ್ಷೆಯ ಕಾರ್ಯ ವಿಧಾನ ಹೇಗೆ?:  ಗ್ರಾಮಮಟ್ಟದಲ್ಲಿ ನೇಮಕವಾದ ಖಾಸಗಿ ಏಜೆನ್ಸಿಗಳವರು ಮೊದಲಿಗೆ ಆ ಗ್ರಾಮದ ಎಲ್ಲಾ ರೈತರ ಸರ್ವೇ ನಂಬರ್ ವಿವರ ಇರುವ ನಕ್ಷೆಯನ್ನು ಬೆಳೆ ಸಮೀಕ್ಷೆಯ ಮೊಬೈಲ್ ಅಪ್ಲಿಕೇಷನ್‌ನಲ್ಲಿ ಡೌನ್ ಲೋಡ್ ಮಾಡಿಕೊಂಡು ನಂತರ ನಿರ್ದಿಷ್ಟ ರೈತರ ಜಮೀನಿಗೆ ಭೇಟಿ ನೀಡಿ ಅಲ್ಲಿ ಬೆಳೆದಿರುವ ಬೆಳೆಯ ಜಿಪಿಎಸ್ ಫೋಟೋ ತೆಗೆದು ಬೆಳೆ ಮಾಹಿತಿಯನ್ನು ದಾಖಲಿಸಿ, ಮೊಬೈಲ್ ಅಪ್ಲಿಕೇಷನ್ ಮೂಲಕವೇ ಅಪ್‌ಲೋಡ್ ಮಾಡುತ್ತಾರೆ. ರೈತರು ತಮ್ಮ ಜಮೀನಿನಲ್ಲಿನ ಬೆಳೆ ಮಾಹಿತಿಯನ್ನು ನಿಖರವಾಗಿ ದಾಖಲಿಸಲು ಕೂಡಲೇ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ನಿಮ್ಮ ಹಳ್ಳಿಗೆ ನೇಮಕ ಮಾಡಿರುವ ಖಾಸಗಿ ಏಜೆನ್ಸಿಯ ಮೊಬೈಲ್ ಸಂಖ್ಯೆ ಪಡೆದು ಅವರನ್ನು ಸಂಪರ್ಕಿಸಿ ನಿಮ್ಮ ಜಮೀನಿನ ಬೆಳೆ ಮಾಹಿತಿಯನ್ನು ನಿಖರವಾಗಿ ದಾಖಲಿಸಿಕೊಳ್ಳಿ.

ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ರೈತರ ಪಹಣಿಯಲ್ಲಿ ನಮೂದಾದ ಬೆಳೆ ಮಾಹಿತಿ ತಿಳಿಯಲು ಕೃಷಿ ಇಲಾಖೆ ಮೊಬೈಲ್ ಅಪ್ಲಿಕೇಷನ್ ಬಿಡುಗಡೆ ಮಾಡಿದ್ದು, ಸ್ವತಃ ರೈತರೇ ತಮ್ಮ ಜಮೀನಿನ ಬೆಳೆ ಮಾಹಿತಿಯನ್ನು ದಾಖಲಿಸಲು ಅವಕಾಶ ನೀಡಲಾಗಿದೆ.

ಪ್ರಯೋಜನಗಳೇನು?: 

* ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ವಿಮೆ ಪರಿಹಾರ ಪಡೆಯಲು ಸಹಕಾರಿ

* ಪಹಣಿಯಲ್ಲಿ ಬೆಳೆ ಮಾಹಿತಿ ದಾಖಲಿಸಲು ಸಮೀಕ್ಷೆ ಅವಶ್ಯ

* ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಯಲ್ಲಿನ ಸಬ್ಸಿಡಿ ಪ್ರಯೋಜನವನ್ನು ಪಡೆಯಲು ಅತ್ಯವಶ್ಯಕ.

ಗೂಗಲ್ ಪ್ಲೇಸ್ಟೋರ್‌ನಲ್ಲಿ ರೈತರ ಬೆಳೆ ಸಮೀಕ್ಷೆ ಆಪ್-೨೦೨೫ ‘ Former Crop Survey App’ ಡೌನ್‌ಲೋಡ್ ಮಾಡಿಕೊಳ್ಳಿ.

. ಆಪ್ ತೆರೆಯಿರಿ

. ಋತು- ಮುಂಗಾರು ಆಯ್ಕೆ ಮಾಡಿಕೊಳ್ಳಿ

. ಆಧಾರ್‌ನಲ್ಲಿನ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸುವ (ಉhqs) ಮೂಲಕ ಆಧಾರ್ ದೃಢೀಕರಿಸಿ

.ರೈತರ ಮಾಹಿತಿ ನಮೂದಿಸಿ ಅಥವಾ ಪರಿಶೀಲಿಸಿ

. ತಮ್ಮ ಜಮೀನಿನ ಸ.ನಂ ನಮೂದಿಸಿ. ಹೆಸರು, ಜನ್ಮ ದಿನಾಂಕ, ವಿಳಾಸ, ಮೊಬೈಲ್ ಸಂಖ್ಯೆ ನಮೂದಿಸಿ ಒಟಿಪಿ ಪಡೆದು ಸಲ್ಲಿಸಿ

. ಬೆಳೆ ಸಮೀಕ್ಷೆ ಆರಂಭಿಸಿ (ಬೆಳೆ ಸಮೀಕ್ಷೆ ಮಾಡುವ ಸ.ನಂ ಜಮೀನನ್ನು ಆಯ್ಕೆ ಮಾಡಿಕೊಂಡು ಆ ಸರ್ವೆ ನಂಬರ್‌ನಲ್ಲಿಯೇ ನಿಂತು ಸಮೀಕ್ಷೆ ಪ್ರಾರಂಭಿಸಬೇಕು

.ಬೆಳೆಯ ವಿವರ ನಮೂದಿಸಿ (ರಾಗಿ, ಜೋಳ ಇತ್ಯಾದಿ)

-ಬೆಳೆಯ ವಿಧ (ಏಕ ಬೆಳೆ, ಅಂತರ ಬೆಳೆ, ಮಿಶ್ರಬೆಳೆ)

-ಬಿತ್ತನೆ ಸಮಯ (ಕೃಷಿ ಬೆಳೆಗಳಲ್ಲಿ)

-ನೀರಾವರಿ ವಿಧ (ಮಳೆ ಆಶ್ರಿತ ಅಥವಾ ನೀರಾವರಿ)

-ವಿಸ್ತೀರ್ಣ (ಎಕರೆ, ಗುಂಟೆ)

– ಬೆಳೆಯ ಹೆಸರು ಮತ್ತು ಛಾಯಾಚಿತ್ರ ಅಪ್‌ಲೋಡ್ ಮಾಡಿ

. ಎಲ್ಲಾ ಬೆಳೆಗಳನ್ನು ನಮೂದಿಸಿರುವ ಮಾಹಿತಿ ಖಚಿತಪಡಿಸಿಕೊಳ್ಳಿ

. ಸಮೀಕ್ಷೆಯನ್ನು ಅಪ್‌ಲೋಡ್ ಮಾಡಿ

೧೦. ಅಪ್‌ಲೋಡ್ ವಿವರದಲ್ಲಿ ಅಪ್‌ಲೋಡ್ ಯಶಸ್ವಿಯಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಬೆಳೆ ಮಾಹಿತಿಯನ್ನು ಪ್ರತಿ ಗ್ರಾಮಕ್ಕೆ ನೇಮಿಸಲಾದ ಇಲಾಖಾ ಅಧಿಕಾರಿಗಳು ಪರಿಶೀಲಿಸಿ ಅನುಮೋದಿಸಲಿ ದ್ದಾರೆ. ಮಾಹಿತಿಗೆ ಸಹಾಯವಾಣಿ ೮೪೪೮೪೪೭೭೧೫ ಸಂಪರ್ಕಿಸಬಹುದು

Tags:
error: Content is protected !!