ಕಾಫಿ ಬೆಲೆಯು ಏರಿಕೆ ಕಂಡಿದ್ದು, ಕಾಫಿ ಬೆಳೆಗಾರರಲ್ಲಿ ಮಂದಹಾಸ ಮೂಡಿದೆ.
ಪರಿಣಾಮ ಕಾಫಿ ಬೆಳೆಗಾರರು ಬೆಲೆ ಏರಿಕೆಯ ಲಾಭ ಪಡೆದುಕೊಂಡು ಕಾಫಿ ಕೊಯ್ಲು ಆರಂಭಿಸಿದ್ದಾರೆ. ೫೦ ಕೆಜಿ ಚೀಲ ತೂಕದ ರೊಬಸ್ಟಾ ಚೆರ್ರಿ ಕಾಫಿ ಬೆಲೆಯು ೧೧,೫೦೦ ರೂ. ತಲುಪಿದೆ. ರೊಬಸ್ಟಾ ಕಾಫಿ ಕೆಜಿಗೆ ೪೦೫ ರೂ. ಗಳಿಂದ ೪೧೦ ರೂ. ಆಸುಪಾಸಿನಲ್ಲಿದೆ. ಈ ಬಾರಿ ಬಹುತೇಕ ತೋಟ ಗಳಲ್ಲಿ ಒಂದು ಮೂಟೆ ರೊಬಸ್ಟಾ ಚೆರ್ರಿಯಲ್ಲಿ ೨೭ರಿಂದ ೨೮ ಕೆಜಿ ಇಳುವರಿ ಸಿಗುತ್ತಿದೆ. ಮೊದಲ ಕೊಯ್ಲಿನಲ್ಲಿ ಒಂದು ಚೀಲ ಕಾಫಿಗೆ ೨೯ ಕೆಜಿ ಇಳುವರಿ ಸಿಕ್ಕಿದೆ. ಇದರಿಂದ ಚೀಲವೊಂದಕ್ಕೆ ೧೧,೫೦೦ ರೂ. ಬೆಲೆ ಏರಿಕೆಯಾಗಿದೆ ಎಂದು ಕಾಫಿ ಬೆಳೆಗಾರರು ತಿಳಿಸಿದ್ದಾರೆ.
ಪ್ರತಿವರ್ಷ ಒಂದೇ ಬಾರಿಗೆ ಕಾಫಿ ಕೊಯ್ಲು ಮಾಡಲಾಗುತ್ತಿತ್ತು. ಈ ಬಾರಿ ಹಣ್ಣು ಮಾತ್ರ ಕೊಯ್ಯುವ ಕ್ರಮ ಹೆಚ್ಚಾಗಿದೆ. ಇದರಿಂದ ೨ನೇ ಕೊಯ್ಲಿನಲ್ಲಿ ಹೆಚ್ಚು ಹಣ್ಣು ಸಿಗಲಿದ್ದು, ಫಸಲಿನ ಗುಣಮಟ್ಟ ಮತ್ತು ತೂಕ ಹೆಚ್ಚಾಗುತ್ತದೆ ಎಂಬುದು ಬೆಳೆಗಾರರ ಅಂಬೋಣ. ಅಲ್ಲದೆ ಕಾಫಿ ಕೊಯ್ಯುವ ಕಾರ್ಮಿಕರಿಗೂ ಹೆಚ್ಚಿನ ಕೂಲಿ ಸಿಗುತ್ತಿದೆ. ರೊಬಸ್ಟಾ ಕಾಫಿಯಲ್ಲಿ ಶೇ. ೧೩ ರವರೆಗೆ ತೇವಾಂಶ ಇರಬಹುದು. ಅತಿ ಹೆಚ್ಚು ಒಣಗಿಸಿದರೆ ತೇವಾಂಶ ೧೦ಕ್ಕಿಂತ ಕಡಿಮೆಯಾ ಗುತ್ತದೆ. ಚೀಲವೊಂದಕ್ಕೆ ೨ ಕೆಜಿ ತೂಕ ಇಳಿಕೆ ಯಾಗುತ್ತದೆ ಎಂಬುದು ಬೆಳೆಗಾರರ ಲೆಕ್ಕಾಚಾರವಾಗಿದೆ.





