ನವದೆಹಲಿ: ಕೆನಡಾದ ನೆಲೆಸಿರುವ ಭಾರತೀಯ ಮೂಲದ ಟಿಕ್‌ಟಾಕ್ ಸ್ಟಾರ್ ಮೇಘಾ ಠಾಕೂರ್ ಮೃತಪಟ್ಟಿದ್ದಾರೆ. ಅವರಿಗೆ 21 ವರ್ಷ ವಯಸ್ಸಾಗಿತ್ತು. ಮೇಘಾ ಸಾವಿಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಆದರೆ ಅವರ ಪೋಷಕರು ನವೆಂಬರ್ 24ರ ಮುಂಜಾನೆ ಮೇಘಾ ಮೃತಪಟ್ಟರು ಎಂದು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ.
https://www.instagram.com/p/ClsyD-GtNN0/?igshid=ZmRlMzRkMDU=
ಟಿಕ್‌ಟಾಕ್‌ನಲ್ಲಿ 9 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದ ಅವರು ಡ್ಯಾನ್ಸ್‌ಗಳ ಮೂಲಕ ಖ್ಯಾತಿ ಪಡೆದಿದ್ದರು
ಆತ್ಮವಿಶ್ವಾಸ ಹೊಂದಿದ್ದ ಮೇಘಾ ಜೀವನ ಪ್ರೀತಿ ಹೊಂದಿದ್ದರು. ಈ ಸಮಯದಲ್ಲಿ ನಿಮ್ಮ ಆಶೀರ್ವಾದವನ್ನು ವಿನಂತಿಸುತ್ತೇವೆ. ನಮ್ಮ ಪ್ರಾರ್ಥನೆಗಳು ಹಾಗೂ ನಿಮ್ಮ ಆಶೀರ್ವಾದ ಮುಂದಿನ ಪ್ರಯಾಣದಲ್ಲಿ ಅವಳೊಂದಿಗೆ ಇರುತ್ತವೆ. ಎಂದು ಮೇಘಾನ ಫೋಷರು ಭಾವನಾತ್ಮಕ ಫೋಸ್ಟ್‌ನಲ್ಲಿ ಹೇಳಿದ್ದಾರೆ.





