Mysore
18
broken clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಮುಂದಿನ ವಾರ ಒಳ್ಳೆ ಹುಡುಗನ ಮದುವೆ

ಬಿಗ್ ಬಾಸ್ ಖ್ಯಾತಿಯ ಮಾತಿನ ಮಲ್ಲ ಪ್ರಥಮ್ ಮುಂದಿನ ವಾರ ಹಸೆಮಣೆ ಏರಲಿದ್ದಾರೆ. ಪ್ರಥಮ್ ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಬಗೆಗಿನ ಅಪ್ಡೇಟ್ ಹಂಚಿಕೊಂಡಿದ್ದಾರೆ.

 ಮುಂದಿನ ವಾರ ಮದುವೆಯಲ್ಲೇ ಬಂದು ಆಶೀರ್ವಾದ ಮಾಡಬೇಕು ಅಂತೇನೂ ಇಲ್ಲ. ಕರೆಯೋಕೆ ಸಂಭ್ರಮವೂ ಇಲ್ಲ. ಆಹ್ವಾನ ಪತ್ರಿಕೆ ತಲುಪಿಸೋದೆ ಹರಸಾಹಸ. ಹಾಗಂತ ಸುಮ್ಮನೆ ಫಾರ್ವರ್ಡ್ ಮೆಸೇಜ್ ಹಾಕಿ ನಿಮ್ಮನ್ನ ಮದುವೆಗೆ ಕಾಟಚಾರಕ್ಕೆ ಕರೆಯೋದಿಲ್ಲ ಈಗ ಎಲ್ಲಿರ್ತಿರೋ ಅಲ್ಲಿಂದಲೇ ಹಾರೈಸಿ. ನನಗೆ ಆಸಕ್ತಿ ಇಲ್ಲ, ಸರಳವಾಗಿ ಆಗ್ತಿರೋ ಕಾರಣ ನೀವು ಇದ್ದಲ್ಲಿಯೇ ಹಾರೈಸಿ ಒಳ್ಳೆ ಹುಡುಗ ಪ್ರಥಮ್ ತಮ್ಮ ಮದುವೆಯ ಬಗೆಗಿನ ಅಪ್ಡೇಟ್ ಹಂಚಿಕೊಂಡಿದ್ದಾರೆ.

ಮನೆಯವರು ಹುಡುಕಿದ್ದ ಮಂಡ್ಯದ ಹುಡುಗಿ ಭಾನುಶ್ರೀ ಜೊತೆ ಪ್ರಥಮ್ ಇತ್ತೀಚೆಗೆ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಹೊಸ ಬಾಳಿಗೆ ಹೆಜ್ಜೆ ಇಡಲು ಸಜ್ಜಾಗಿದ್ದಾರೆ.

ಮದುವೆ ಅಪ್ಡೇಟ್ ಹಂಚಿಕೊಂಡ ಪ್ರಥಮ್ ಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!