ಬೆಂಗಳೂರು : ಕನ್ನಡ ಚಿತ್ರರಂಗ ಡಾರ್ಲಿಂಗ್ ಕೃಷ್ಣ ಅವರ ಮತ್ತೊಂದು ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ.
ಹೌದು,‘ಕೌಸಲ್ಯಾ ಸುಪ್ರಜಾ ರಾಮ’ ಹೊಸ ಸೇರ್ಪಡೆಯ ಮೂಲಕ ಸದಭಿರುಚಿ ಚಿತ್ರಗಳಿಗೆ ಜನಪ್ರಿಯವಾಗಿರುವ ‘ಮೊಗ್ಗಿನ ಮನಸು’ ಶಶಾಂಕ್ ಈ ಚಿತ್ರದ ನಿರ್ದೇಶಕರು. ಇತ್ತೀಚಿಗೆ ಬಿಡುಗಡೆಗೊಂಡ ಈ ಶೀರ್ಷಿಕೆಗೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಂದು ವಿಭಿನ್ನ ವಿಡಿಯೊ ಮೂಲಕ ಶಶಾಂಕ್ ತಮ್ಮ ಚಿತ್ರದ ಟೈಟಲ್ ಬಿಡುಗಡೆ ಮಾಡಿರುವುದು ವಿಶೇಷ.
https://youtu.be/5Fiz5dDeVyo

‘ಕೌಸಲ್ಯಾ ಸುಪ್ರಜಾ ರಾಮ’ ನಾವು ದಿನ ಬೆಳಗ್ಗೆ ಕೇಳುವ ಸುಮಧುರ ಸುಪ್ರಭಾತದ ಮೊದಲ ಸಾಲು. ಇದೊಂದು ತಾಯಿ ಮಗನ ಭಾವನಾತ್ಮಕ ಸನ್ನಿವೇಶಗಳನ್ನೊಳಗೊಂಡಿರುವ ಚಿತ್ರ. ಹಾಗಂತ ನಮ್ಮ ಚಿತ್ರದಲ್ಲಿ ಮನೋರಂಜನೆಗೆ ಕೊರತೆಯಿಲ್ಲ. ಉತ್ತಮ ಮನೋರಂಜನೆ ಹಾಗೂ ಭಾವನೆ ಇರುವ, ಕುಟುಂಬ ಸಮೇತ ನೋಡಬಹುದಾದ ಸುಂದರ ಕೌಟುಂಬಿಕ ಚಿತ್ರ ಎನ್ನುತ್ತಾರೆ ಶಶಾಂಕ್.
ಡಾರ್ಲಿಂಗ್ ಕೃಷ್ಣ ಅವರ ತಾಯಿ – ತಂದೆ ಪಾತ್ರದಲ್ಲಿ ಸುಧಾ ಬೆಳವಾಡಿ, ರಂಗಾಯಣ ರಘು ಅಭಿನಯಿಸುತ್ತಿದ್ದಾರೆ. ಅಚ್ಯುತ್‌ಕುಮಾರ್, ಗಿರಿರಾಜ್ ಸಹ ತಾರಾಬಳಗದಲ್ಲಿದ್ದಾರೆ. ಇಬ್ಬರು ನಾಯಕಿಯರಿದ್ದು, ಅದರಲ್ಲಿ ಒಬ್ಬರು ಹೊಸಬರು ಎನ್ನುತ್ತಿದೆ ಚಿತ್ರತಂಡ.
ಈಗಾಗಲೇ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಐದು ಹಾಡುಗಳಿದೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ. ಸುಜ್ಞಾನ್ ಈ ಚಿತ್ರದ ಛಾಯಾಗ್ರಾಹಕರು. ಶಶಾಂಕ್ ಸಿನಿಮಾಸ್ ಹಾಗೂ ಬಿ.ಸಿ.ಪಾಟೀಲ್ ಅವರ ಕೌರವ ಪ್ರೊಡಕ್ಷನ್ ಹೌಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.




