ಬೆಂಗಳೂರು: ನಗರದ ರಾಜರಾಜೇಶ್ವರಿ ನಗರ ಕಲ್ಲು ಕ್ವಾರಿಯಲ್ಲಿ ನಡೆಯುತ್ತಿದ್ದ ಆಸೆ ಎಂಬ ಧಾರಾವಾಹಿಯ ಚಿತ್ರೀಕರಣದ ಸಂದರ್ಭದಲ್ಲಿ ಹಿರಿಯ ನಟ ಮಂಡ್ಯ ರಮೇಶ್ ಅವರ ಬಲಗಾಲು ಹಾಗೂ ಮುಂಗೈಗೆ ಪೆಟ್ಟಾಗಿದೆ. ಸ್ಟಾರ್ ಸುವರ್ಣ ಚಾನೆಲ್‌ನಲ್ಲಿ ಪ್ರಸಾರವಾಗಲಿರುವ ಈ ಧಾರಾವಾಹಿಗೆ ನಟ ರಮೇಶ್ ಅರವಿಂದ್ ಬಂಡವಾಳ ಹೂಡಿಕೆ ಮಾಡಿದ್ದಾರೆ.
ಇನ್ನೂ ಪ್ರಸಾರವಾಗದ ಈ ಧಾರಾವಾಹಿಯ ಚಿತ್ರೀಕರಣದಲ್ಲಿ ಭಾಗವಹಿಸಿದ್ದ ಮಂಡ್ಯ ರಮೇಶ್ ಕಾಲು ಜಾರಿ ಬಿದ್ದಿದ್ದಾರೆ. ಕೂಡಲೇ ಮಂಡ್ಯ ರಮೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾಲಿಗೆ ಎರಡು ಆಪರೇಷನ್ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಇನ್ನೂ ಎರಡು ದಿನಗಳ ಕಾಲ ಮಂಡ್ಯ ರಮೇಶ್‌ಗೆ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ನೀಡಲಾಗಲಿದ್ದು, ಬಳಿಕ ಡಿಸ್‌ಚಾರ್ಜ್ ಮಾಡಲಿದ್ದಾರೆ.



