Mysore
19
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಸಿನಿಮಾಲ್‌ : ಅಂದೇ ಬರಲಿದೆ ಮಂಸೋರೆ ಚಿತ್ರ 19.20.21

ಕಳೆದ ವರ್ಷ ಮಾರ್ಚ್ 3ನೇ ತಾರೀಕಿನಂದು ಬೆಂಗಳೂರು ಅಂತಾಷ್ಟ್ರೀಯ ಚಿತ್ರೋತ್ಸವದ 13ನೇ ಆವೃತ್ತಿ ಉದ್ಘಾಟನೆ ಆಗಿತ್ತು. ಕಾಕತಾಳೀಯವಾಗಿ ಅಂದು ಕನ್ನಡದ ಮೊದಲ ಚಿತ್ರ ‘ಸತಿ ಸುಲೋಚನಾ’ ತೆರೆ ಕಂಡ ದಿನ. ಮುಂದಿನ ದಿನಗಳಲ್ಲಿಉದ್ಘಾಟನೆಉನ್ನು ಮಾರ್ಚ್ 3ರಂದೇ ಮಾಡುವುದಾಗಿ ಚಿತ್ರೋತ್ಸವ ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಕಟಿಸಿದ್ದೇ ಅಲ್ಲದೆ ಅದನ್ನು ‘ವಿಶ್ವ ಕನ್ನಡ ಸಿನಿಮಾ ದಿನ’ ಎಂದು ಕರೆಯುವುದಾಗಿಯೂ ಹೇಳಿದರು.
ಈ ಬಾರಿ ಚಿತ್ರೋತ್ಸವ ಮೂರರಿಂದ ಇಪ್ಪತ್ಮೂರಕ್ಕೆ ಹೋಗಿದೆ. ಮುಖ್ಯಮಂತ್ರಿಗಳು ತಮ್ಮ ಜವಾಬ್ದಾರಿಉನ್ನು ಸಚಿವ ಆರ್.ಅಶೋಕ್ ಅವರ ಹೆಗಲಿಗೆ ವರ್ಗಾಯಿಸಿದ್ದಾರೆ. ಅಶೋಕ್ ಅವರಂತೂ ಕನ್ನಡದ ಚಿತ್ರಗಳಿಗೆ ಆದ್ಯತೆ ಸಿಗಬೇಕು, ಹಳೆಯ ಕನ್ನಡ ಕ್ಲಾಸಿಕ್‌ಗಳನ್ನು ಚಿತ್ರೋತ್ಸವದಲ್ಲಿ ಪ್ರದರ್ಶಿಸಬೇಕು ಎಂದು ಸಲಹೆ ಮಾಡಿದ್ದಾರಂತೆ. ಅದ ಕಾರ್ಯಗತವಾಗುವ ಸೂಚನೆ ಇದೆ. ಕನ್ನಡ ಜನಪ್ರಿಯ ಚಿತ್ರಗಳ ಪನೋರಮಾ ವಿಭಾಗವೊಂದು ಈ ಬಾರಿ ಸೇರಿಕೊಂಡಿದೆ. ಅದರ ಜೊತೆಗೆ ಕನ್ನಡ ಮತ್ತು ಅಂತಾರಾಷ್ಟ್ರೀಯ ಕ್ಲಾಸಿಕ್‌ಗಳ ಮರುಯಾನವೂಇದೆ. ಕಳೆದ ವರ್ಷಕ್ಕಿಂತ ಇಪ್ಪತ್ತು ದಿನ ತಡವಾದರೂ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿಕನ್ನಡ ಚಿತ್ರಗಳ ವಿಜೃಂಭಣೆ ಇರಲಿದೆ!
ಕನ್ನಡ ಸಿನಿಮಾ ದಿನ, ಮಾರ್ಚ್ 3ರಂದು ತೆರೆಗೆ ಬರಲಿರುವ ಚಿತ್ರ ‘ಕಡಲ ತೀರದ ಭಾರ್ಗವ’. ಕಡಲ ತೀರದ ಭಾರ್ಗವ ಎಂದಾಕ್ಷಣ ನಿಮಗೆ ಶಿವರಾಮ ಕಾರಂತರನೆನಪಾಗಬಹುದು. ಅವರು ಕನ್ನಡ ಚಿತ್ರಗಳು ಮಾತನಾಡುವ ಮೊದಲೇ ಮೂಕಿಚಿತ್ರಗಳನ್ನು ನಿರ್ಮಿಸಿ, ನಿರ್ದೇಶಿಸಿದ ಸಾಹಸಿ. ‘ಡೊಮಿಂಗೋ’ ಮತ್ತು ‘ಭೂತರಾಜ್ಯ’ ಅವರು ನಿರ್ದೇಶಿಸಿದ್ದ ಮೂಕಿ ಚಿತ್ರಗಳು.
‘ಇದು ಅವರ ಜೀವನ ಕಥೆೆಯನೂ ಅಲ್ಲ. ಇದು ಕಡಲ ತೀರದಲ್ಲಿ ವಾಸಿಸುವ ಭಾರ್ಗವ ಹೆಸರಿನ ಯುವಕನ ಕಥೆ’ ಎನ್ನುತ್ತಾರೆ ಚಿತ್ರದ ನಿರ್ದೇಶಕರಾದ ಪನ್ನಗ ಸೋಮಶೇಖರ್.
ಈ ಚಿತ್ರದ ಮೊದಲ ಟಿಕೆಟಿನ ಹರಾಜಿನಲ್ಲಿ ಬಂದ ಹಣವನ್ನು ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ನೀಡಲು ಚಿತ್ರದ ನಿರ್ಮಾಪಕರಾದ ಪಟೇಲ್ ವರುಣ್‌ರಾಜು ಹಾಗೂ ಭರತ್‌ಗೌಡ ನಿರ್ಧರಿಸಿದ್ದಾರೆ. ಅಂದು ನಡೆದ ಹರಾಜಿನಲ್ಲಿ ಈ ಟಿಕೆಟನ್ನು ಕೊಂಡವರು ಅಂದು ಬಂದಿದ್ದ ಮೋಹನ್ ರಾಜು. ಅವರು 2 ಲಕ್ಷ ರೂ. ನೀಡಿ ಈ ಚಿತ್ರದ ಮೊದಲ ಟಿಕೆಟ್ ಪಡೆದುಕೊಂಡರು. ಅವರು ಟಿಕೆಟನ್ನು ಈ ಬೆಲೆಗೆ ಕೊಂಡುಕೊಂಡದ್ದೇ ಅಲ್ಲದೆ, ‘ಕ’ಕಾರದಲ್ಲಿ ಆರಂಭವಾದ ಹೆಸರುಳ್ಳ ‘ಕೆ.ಜಿ.ಎಫ್’, ‘ಕಾಂತಾರ’ ಚಿತ್ರಗಳುಗೆದ್ದಂತೆ ‘ಕಡಲ ತೀರದ ಭಾರ್ಗವ’ ಕೂಡ ಪ್ರಚಂಡ ಯಶಸ್ಸು ಕಾಣಲಿ ಎಂದು ಹಾರೈಸಿದರು. ನಿರ್ಮಾಪಕರಲ್ಲಿ  ಪಟೇಲ್ ವರದರಾಜು ಚಿತ್ರದಲ್ಲಿ ಭಾರ್ಗವ ಪಾತ್ರವನ್ನು ನಿರ್ವಹಿಸಿದ್ದಾರೆ.
ಮಂಸೋರೆ ನಿರ್ದೇಶನದ ‘19.20.21 ಚಿತ್ರ ಕೂಡ ಮಾರ್ಚ್ 3ರಂದೇ ತೆರೆಗೆ ಬರಲಿದೆ. ಇದು ಕೂಡ ಕರಾವಳಿಯ ಕಥಾನಕ ಎನ್ನುವುದು ವಿಶೇಷ. ಮಂಸೋರೆ ಪ್ರಕಾರ ನೈಜಘಟನೆ ಆಧರಿಸಿದ ಸಿನಿಮಾವಿದು. ಕರಾವಳಿಯಲ್ಲಿ ಎರಡು ದಶಕಗಳ ಕಾಲ ಒಂದು ಸಮುದಾಯ ಅನುಭವಿಸಿದ ನೋವು, ಆ ನೋವಿನ ವಿರುದ್ಧ ನಡೆಸಿದ ಹೋರಾಟ ಈ ಸಿನಿಮಾ ಮಾಡಲು ಸ್ಪೂರ್ತಿ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ