Mysore
17
overcast clouds

Social Media

ಗುರುವಾರ, 08 ಜನವರಿ 2026
Light
Dark

ನಟಿ ವಿನಯ ಪ್ರಸಾದ್ ಮನೆಯಲ್ಲಿ ಕಳ್ಳತನ, ಲಾಕರ್ ಮುರಿದು ನಗದು ಕಳವು

ಬೆಂಗಳೂರು: ಕನ್ನಡದ ಹಿರಿಯ ನಟಿ ವಿನಯ ಪ್ರಸಾದ್ ಅವರ ಬೆಂಗಳೂರು ಮನೆಯಲ್ಲಿ ಕಳ್ಳತನವಾಗಿದೆ. ವಿನಯಪ್ರಸಾದ್ ಅವರ ಬೆಂಗಳೂರಿನ ನಂದಿನಿ ಲೇಔಟ್ನಲ್ಲಿರುವ ನಿವಾಸಕ್ಕೆ ಕಳೆದ ಅಕ್ಟೋಬರ್ 22ರಂದು ಮನೆ ಬೀಗ ಒಡೆದು ನುಗ್ಗಿರುವ ಕಳ್ಳರು ಲಾಕರ್ನಲ್ಲಿದ್ದ ಸುಮಾರು 7 ಸಾವಿರ ರೂ. ಹಣ ದೋಚಿ ಪರಾರಿಯಾಗಿದ್ದಾರೆ.
ದೀಪಾವಳಿ ಹಬ್ಬಕ್ಕೆಂದು ಉಡುಪಿಗೆ ತೆರಳಿದ್ದ ನಟಿ ಅ. 26ರಂದು ಮನೆಗೆ ಹಿಂದಿರುಗಿದ್ದರು. ಈ ವೇಳೆ ಮನೆಯಲ್ಲಿ ಕಳ್ಳತನವಾಗಿರುವುದನ್ನು ಪತ್ತೆಯಾಗಿದೆ. ಕೂಡಲೇ ನಂದಿನಿ ಲೇಔಟ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!