Mysore
19
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ವೀರಗಾಸೆ ಕಲಾವಿದರಿಗೆ ಅವಮಾನ ಮಾಡಿಲ್ಲ : ಡಾಲಿ ಧನಂಜಯ ಸ್ಪಷ್ಟನೆ

ಬೆಂಗಳೂರು :  ಕನ್ನಡ ಚಿತ್ರರಂಗದ ನಟ ಡಾಲಿ ಧನಂಜಯ್ ಅವರು ಅಭಿನಯಿಸಿರುವ ಹೆಡ್ ಬುಷ್ ಸಿನಿಮಾದಲ್ಲಿ ವೀರಗಾಸೆ ಕಲಾವಿದರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ  ಡಾಲಿ ಧನಂಜಯ್ ಅವರೇ ಸ್ಪಷ್ಟನೆಯನ್ನು ನೀಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು ನಾನು ಕೂಡ ವೀರಭದ್ರ ದೇವರ ಆರಾಧಕ ಆಗಿರುವುದರಿಂದ ಯಾವುದೇ ಕಾರಣಕ್ಕೂ ಚಿತ್ರದಲ್ಲಿ ವೀರಭದ್ರ ದೇವರ ವೀರಗಾಸೆಗೆ ಅವಮಾನ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಿನಿಮಾವನ್ನು ನೋಡದವರು ಚಿತ್ರದ ಕುರಿತು ಆಕ್ಷೇಪ ಎತ್ತುತ್ತಿದ್ದಾರೆ. ಚಿತ್ರದಲ್ಲಿ ಅದು ನಿಜವಾದ ವೀರಗಾಸೆ ಕಲಾವಿದರ ಪಾತ್ರಧಾರಿಗಳಿಗೆ ನಾನು ಹೊಡೆಯುವ ದೃಶ್ಯವಲ್ಲ. ಬದಲಿಗೆ ವೀರಗಾಸೆ ಕಲಾವಿದರಿಗೆ ಅವಮಾನ ಮಾಡಿದ ಪಾತ್ರಧಾರಿಗಳಿಗೆ ನಾನು ಜಯರಾಜ್ ಪಾತ್ರಧಾರಿ ಆಗಿ ಹೊಡೆದಿರುವ ದೃಶ್ಯವದು. ನಿಜವಾದ ಕಲಾವಿದರ ಪಾತ್ರಧಾರಿಗಳು ಹಿಂದೆ ಚಪ್ಪಲಿ ಇಲ್ಲದೆ ಇದ್ದಾರೆ. ನಕಲಿ ಪಾತ್ರಧಾರಿಗಳು ಕಾಲಿಗೆ ಶೂ  ಧರಿಸಿಕೊಂಡಿದ್ದಾರೆ. ನಾನು ವೀರಗಾಸೆ ಪಾತ್ರಗಳನ್ನು ಶಾಲೆ ಕಾಲೇಜುಗಳಲ್ಲಿ ಮಾಡುತ್ತಿದೆ. ನನಗೆ ಆ ಕಲೆಯ ಬಗ್ಗೆ ಅಪಾರವಾದ ಗೌರವವಿದೆ ಅವರಿಗೆ ನಾನು ಅವಮಾನ ಮಾಡಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ