ಹೊಸಪೇಟೆ : ನಟ ಚಾಲೇಂಜಿಂಗ್ ದರ್ಶನ್ ಅಭಿನಯದ ಕ್ರಾಂತಿ ಸಿನೆಮಾದ ಪ್ರಚಾರದ ವೇಳೆ ಕಿಡಿಗೇಡಿಗಳು ನಟ ದರ್ಶನ ಮೇಲೆ ಚಪ್ಪಲಿ ಎಸೆದ ಘಟನೆ ಬಳ್ಳಾರಿಯ ಹೊಸಪೇಟೆಯಲ್ಲಿ ನಿನ್ನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ನಟ ದರ್ಶನ್ ತೂಗದೀಪ ಅಭಿಯನದ ಬಹುನಿರೀಕ್ಷಿತ ಕ್ರಾಂತಿ ಚಿತ್ರದ “ಬೊಂಬೆ, ಬೊಂಬೆ’ ಆಡಿಯೋ ಬಿಡುಗಡೆ ಸಮಾರಂಭ ನಗರದ ವಾಲ್ಮೀಕಿ ವೃತ್ತದಲ್ಲಿ ಭಾನುವಾರ ರಾತ್ರಿ ನಡೆಯಿತು. ಈ ವೇಳೆ ದರ್ಶನ ನೋಡಲು ಸಾವಿರಾರು ಜನರು ಆಗಮಿಸಿದ್ದರು, ಆದರೆ ಈ ವೇಳೆ ಕಿಡಿಗೇಡಿಗಳು ದರ್ಶನ ಮೇಲೆ ಚಪ್ಪಲಿ ಎಸೆದಿದ್ದಾರೆ. ಲಘು ಲಾಠಿ ಪ್ರಹಾರ: ನಟ ದರ್ಶನ್ ಅಭಿಯನದ ಕ್ರಾಂತಿ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕಲ್ಲು ತೂರಾಟ ನಡೆದಿದ್ದು, ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ ಭಾನುವಾರ ರಾತ್ರಿ ನಡೆದಿದೆ.
ಘಟನೆ ಹಿನ್ನೆಲೆಯಲ್ಲಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಕೆಲ ಯುವಕರು ದರ್ಶನ್ ಬ್ಯಾನರ್ ಹರಿದು ಹಾಕಿದ್ದರು. ಈ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಹಾಡು ಬಿಡುಗಡೆಗೊಳಿಸಿ ಚಿತ್ರ ತಂಡ ಮರಳಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಹಾಸಪಟ್ಟಿದ್ದಾರೆ.





