Mysore
21
mist

Social Media

ಮಂಗಳವಾರ, 23 ಡಿಸೆಂಬರ್ 2025
Light
Dark

ಟ್ಯಾಟೂ ಫೋಟೋ ವೈರಲ್‌: ಟ್ರೋಲ್ ಆದ ನಟಿ ಅನುಪಮಾ ಪರಮೇಶ್ವರನ್‌

ನಟ ಪುನೀತ್‌ ರಾಜ ಕುಮಾರ್‌ ಅಭಿನಯದ “ನಟಸಾರ್ವ ಭೌಮ’ ಸಿನಿಮಾದ ನಾಯಕ ನಟಿ ಅನುಪಮಾ ಪರಮೇಶ್ವರನ್‌ ಇದೀಗ ಮತ್ತೆ ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಪ್ರಿಯರಿಗೆ ಆಹಾರವಾಗಿದ್ದಾರೆ. ಅದಕ್ಕೆ ಕಾರಣವಾಗಿರುವುದು ಇತ್ತೀಚೆಗೆ ಅನುಪಮಾ ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿರುವ ಫೋಟೋ.

ಹೌದು, ಸದಾ ಟ್ರೆಡಿಷನಲ್‌ ಲುಕ್‌ನಲ್ಲಿ ಕಾಣಿಸಿಕೊಳ್ತಿದ್ದ ನಟಿ ಅನುಪಮಾ ಪರಮೇಶ್ವರನ್‌, ಇತ್ತೀಚೆಗಷ್ಟೇ ತಮ್ಮ ಎದೆಭಾಗದಲ್ಲಿ ಹಾಕಿಸಿಕೊಂಡಿರುವ ಟ್ಯಾಟೂ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ.

Anupama Parameswaran flaunts new tattoo on private part - Netizens freeze -  Tamil News - IndiaGlitz.com

ಈ ಫೋಟೋವನ್ನು ನೋಡಿದ ಹಲವರು ಲೈಕ್‌ ಮಾಡಿದರೆ, ಇನ್ನು ಕೆಲವರು ಪ್ರಚಾರದ ಆಸೆಗಾಗಿ ಈ ಥರ ಫೋಟೋಗಳನ್ನು ಶೇರ್‌ ಮಾಡಬೇಡಿ ಎಂದಿದ್ದಾರೆ. ಇನ್ನು ಕೆಲವರು ಫೋಟೋವನ್ನು ನೋಡಿ ನಿಮ್ಮ ಮೇಲೆ ಇದ್ದ ಅಭಿಮಾನ ಕಮ್ಮಿಯಾಯ್ತು. ದಯವಿಟ್ಟು ಈ ತರಹ ಫೋಟೋ ಹಾಕ ಮಾಡಬೇಡಿ ಎಂದು ಸಲಹೆ ನೀಡಿದ್ದಾರೆ. ಒಟ್ಟಾರೆ ಅನುಪಮಾ ಹಾಕಿರುವ ಒಂದೇ ಫೋಟೋ ಒಂದಷ್ಟು ವೈರಲ್‌ ಆಗಿದ್ದಂತೂ ಸುಳ್ಳಲ್ಲ!

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!