Mysore
14
overcast clouds

Social Media

ಸೋಮವಾರ, 15 ಡಿಸೆಂಬರ್ 2025
Light
Dark

‘ಜೈಲರ್‌’ ಚಿತ್ರದಲ್ಲಿ ಶಿವಣ್ಣ ಕಮಾಲ್‌: ತಮಿಳಿನಲ್ಲಿ ನಟಿಸಲು ಶಿವಣ್ಣಗೆ ಅಭಿಮಾನಿಗಳ ಕರೆ

ಬೆಂಗಳೂರು : ರಜಿನಿಕಾಂತ್‌ ಅವರ ಬಹುನಿರೀಕ್ಷಿತ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿರುವ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಅವರು ಭಾರೀ ಸದ್ದನ್ನು ಮಾಡಿದ್ದಾರೆ. ಜೈಲರ್‌ ನೋಡಿ ಬಂದಿರುವ ಸಿನಿಪ್ರಿಯರು ಶಿವರಾಜ್‌ಕುಮಾರ್‌ ಅವರು ಮಾಡಿರುವ ಸಣ್ಣ ಅವಧಿಯ ಪಾತ್ರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಚಿತ್ರ ರಜಿನಿಕಾಂತ್‌ರದ್ದಾಗಿದ್ದರೂ ಗಮನ ಸೆಳೆದಿದ್ದು ಶಿವರಾಜ್‌ಕುಮಾರ್‌ ಎಂದು ಅಭಿಮಾನಿಗಳು ಟ್ಟೀಟ್ ಮಾಡಿದ್ದು, ಇನ್ನು ಕೆಲವರು ಈ ಚಿತ್ರದಿಂದ ಶಿವರಾಜ್‌ಕುಮಾರ್‌ ಅವರ ಅಭಿಮಾನಿಗಳಾಗಿರುವುದಾಗಿ ಹೇಳಿಕೊಂಡಿದ್ದಾರೆ.

ನಾನು ಇದುವರೆಗೆ ಶಿವರಾಜ್‌ಕುಮಾರ್‌ ಅವರ ಯಾವುದೇ ಚಿತ್ರವನ್ನು ನೋಡಿಲ್ಲ, ಆದರೆ, ಜೈಲರ್‌ನಲ್ಲಿ ಅವರು ಕಣ್ಣಿನ ಮೂಲಕ ನೀಡುವ ರಿಯಾಕ್ಷನ್‌ ನೋಡಿದ ಮೇಲೆ ಇವರೊಳಗಿನ ನಟನ ದೈತ್ಯ ಪ್ರತಿಭೆ ಅರಿವಾಗಿದೆ, ಇವರ ಎಲ್ಲಾ ಸಿನೆಮಾಗಳನ್ನು ನೋಡಬೇಕು ಎಂದು ನೆಟ್ಟಿಗರೊಬ್ಬರು ಟ್ವೀಟ್‌ ಮಾಡಿದ್ದಾರೆ.

ಇನ್ನು ಕೆಲವರು ಶಿವರಾಜ್‌ಕುಮಾರ್‌ ಅವರು ತಮಿಳಿನಲ್ಲಿ ಪೂರ್ಣ ಪ್ರಮಾಣದ ಮಾಸ್‌ ಸಿನೆಮಾ ಮಾಡಬಬೇಕೆಂದು ಆಗ್ರಹ ವ್ಯಕ್ತಪಡಿಸಿದ್ದರೆ, ವೆಟ್ರಿಮಾರನ್‌ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಅಭಿನಯಿಸುವುದನ್ನು ನೋಡಬೇಕು ಎಂದು ಇನ್ನೊಬ್ಬರು ಆಸೆ ವ್ಯಕ್ತಪಡಿಸಿದ್ದಾರೆ.

ನೀನು ಗನ್‌ನಿಂದ ಹೆದರಿಸಿರುವುದಕ್ಕಿಂತ ಹೆಚ್ಚಿನ ಜನರನ್ನು ನಾನು ಕಣ್ಣಿಂದಲೇ ಹೆದರಿಸಿದ್ದೀನಿ ಎನ್ನುವ ಶಿವರಾಜ್‌ಕುಮಾರ್‌ ಅವರ ಡೈಲಾಗ್‌ ಅನ್ನು ಹಂಚಿಕೊಂಡಿರುವ ಟ್ವಿಟರ್‌ ಬಳಕೆದಾರರೊಬ್ಬರು ʼನಿರ್ದೇಶಕ ನೆಲ್ಸನ್‌ ದಿಲೀಪ್‌ ಕುಮಾರ್‌ ಇದನ್ನು ಸಾಬೀತು ಪಡಿಸಿ ತೋರಿಸಿದ್ದಾರೆʼ ಎಂದು ಹೇಳಿದ್ದಾರೆ.

ರಜಿನಿಕಾಂತ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಜೈಲರ್‌ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಮಾತ್ರವಲ್ಲದೆ, ಮಲಯಾಳಂನಿಂದ ಮೋಹನ್‌ ಲಾಲ್‌, ವಿನಾಯಕನ್, ಹಿಂದಿಯಿಂದ ಜಾಕಿಶ್ರಾಫ್‌, ತೆಲುಗು ನಟ ಸುನಿಲ್‌ ಸೇರಿದಂತೆ ಹಲವಾರು ಘಟಾನುಘಟಿ ನಟ-ನಟಿಯರು ನಟಿಸಿದ್ದಾರೆ.

https://twitter.com/AppuRO45/status/1689630793466068992?s=20

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!