ಖ್ಯಾತ ಬಾಲಿವುಡ್ನ ಕಿಂಗ್ ಖಾನ್ ಎಂದೇ ಖ್ಯಾತಿಯಾದ ನಟ ಶಾರುಖ್ ಖಾನ್ ಅವರು ‘ಗ್ಲೋಬಲ್ ಐಕಾನ್ ಆಫ್ ಸಿನಿಮಾ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹೌದು, ಯುಎಇಯ ಶಾರ್ಜಾದಲ್ಲಿರುವ ಎಕ್ಸ್ಪೋ ಸೆಂಟರ್ನಲ್ಲಿ ನಡೆದ ಶಾರ್ಜಾ ಇಂಟರ್ನ್ಯಾಷನಲ್ ಬುಕ್ ಫೇರ್(SIBF) 2022ರ 41ನೇ ಆವೃತ್ತಿಯಲ್ಲಿಅವರಿಗೆ ಗ್ಲೋಬಲ್ ಐಕಾನ್ ಆಫ್ ಸಿನಿಮಾ ಮತ್ತು ಕಲ್ಚರಲ್ ನಿರೂಪಣೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಈ ಇವೆಂಟ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಭಾಗಿಯಾಗಿದ್ದರು. ಇದರ ವಿಡಿಯೋಗಳು ಹಾಗೂ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿವೆ





