Mysore
23
haze

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ: ಚಿಕಿತ್ಸೆ ಫಲಿಸದೆ ಯಶ್‌ ಅಭಿಮಾನಿ ಸಾವು

ಗದಗ : ನಟ ರಾಕಿಂಗ್‌ ಸ್ಟಾರ್ ಯಶ್ ಅವರ 38ನೇ ಹುಟ್ಟಹಬ್ಬ ಹಿನ್ನೆಲೆ ಬ್ಯಾನರ್‌ ಕಟ್ಟಲು ಹೋಗಿ ಮೃತಪಟ್ಟ ಯುವಕರನ್ನು ಸಾಂತ್ವಾನ ಮಾಡಲು ಗದಗಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಮತ್ತೊಬ್ಬ ಯಶ್‌ ಅಭಿಮಾನಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ರಾಖೀ ಭಯ್‌ ಹುಟ್ಟು ಹಬ್ಬದಂದು ಗದಗ ಜಿಲ್ಲೆಯ ಕೊರಣಗಿ ಗ್ರಾಮದ ಯುವಕರು ಬ್ಯಾನರ್‌ ಹಾಕುವ ಸಂದರ್ಭದಲ್ಲಿ ವಿದ್ಯತ್‌ ಪ್ರವಹಿಸಿ ಮೃತಪಟ್ಟಿದ್ದರು. ತಮ್ಮ ಅಭಿಮಾನಿಗಳ ಅಗಲಿಕೆಯ ನೋವನ್ನು ಸಹಿಸದ ನಟ ಯಶ್‌, ಮೃತರ ಕುಟುಂಬದವನ್ನು ಸಂತೈಸಲು ಯಶ್‌ ಗದಗಕ್ಕೆ ಭೇಟಿ ನೀಡಿದ್ದರು. ಇನ್ನು ಮೃತರ ಕುಟುಂಬದವರನ್ನು ಸಂತೈಸಿ ವಾಪಾಸ್‌ ತೆರಳುವ ವೇಳೆ ಮತ್ತೊಂದು ರಸ್ತೆ ಅಪಘಾತ ಸಂಭವಿಸಿದೆ.

ಆಸ್ಪತ್ರೆಯಿಂದ ಗದಗಕ್ಕೆ ಮರಳುತ್ತಿದ್ದ ಯಶ್‌ ಅವರನ್ನು ಅಭಿಮಾನಿ ನಿಖಿಲ್‌ ಎಂಬಾತ ತಮ್ಮ ನಾಯಕನನ್ನು ನೋಡಿ ಹಿಂಬಾಲಿಸಿದ್ದಾರೆ. ಈ ವೇಳೆ ಆಯಾತಪ್ಪಿ ಯಶ್​ಗೆ ಭದ್ರತೆ ನೀಡುತ್ತಿದ್ದ ಪೊಲೀಸರ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿಯಾಗಿ ಯುವಕನ ತಲೆಗೆ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು(ಮಂಗಳವಾರ) ಬೆಳಗ್ಗೆ ನಿಖಿಲ್ ಮೃತಪಟ್ಟಿದ್ದಾರೆ.

ಗದಗ ಮುಳುಗುಂದ ರಸ್ತೆಯಲ್ಲಿ ಯಶ್ ಬೆಂಗಾವಲು ವಾಹನಕ್ಕೆ ಬಿಂಕದಕಟ್ಟಿ ಗ್ರಾಮದ ಯಶ್‌ ಅಭಿಮಾನಿ ನಿಖಿಲ್ ಸ್ಕೂಟಿ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡ ಯುವಕನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಯುವಕ ನಿಖಿಲ್‌ ಮೃತಪಟ್ಟಿದ್ದಾರೆ..

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!