Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕಾಪಿರೈಟ್ ಪ್ರಕರಣ ; ಕಾನೂನು ಹೋರಾಟ ಮಾಡುವುದಾಗಿ ರಕ್ಷಿತ್ ಶೆಟ್ಟಿ ಸುದೀರ್ಘ ಪತ್ರ

ಬೆಂಗಳೂರು : ಬ್ಯಾಚುರಲ್‌ ಪಾರ್ಟಿ ಕಾಪಿರೈಟ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾನೂನು ಹೋರಾಟ ಮಾಡುತ್ತೇನೆ ಎಂದು ನಟ ರಕ್ಷಿತ್‌ ಶೆಟ್ಟಿ ಹೇಳಿದ್ದಾರೆ.

ಎರಡು ಚಿತ್ರದ ಹಾಡುಗಳನ್ನ ಅನುಮತಿ ಪಡೆಯದೆ ಬಳಕೆ ಮಾಡಿರುವ ಆರೋಪದಡಿ ರಕ್ಷಿತ್‌ ಶೆಟ್ಟಿ ವಿರುದ್ಧ ಬೆಂಗಳೂರಿನ ಯಶವಂತಪುರ ಪೊಲೀಸ್‌ ಠಾಣೆಯಲ್ಲಿ FIR ದಾಖಲಾಗಿತ್ತು. ಎಂಆರ್‌ ಟಿ ಮ್ಯೂಸಿಕ್‌ ನ ಪಾಲುದಾರಿಕೆ ಹೊಂದಿರುವ ನವೀನ್‌ ಕುಮಾರ್‌ ಎಂಬುವವರು ರಕ್ಷಿತ್‌ ಶೆಟ್ಟಿ ವಿರುದ್ಧ ದೂರು ನೀಡಿದ್ದರು.

ಹೀಗಾಗಿ ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಟ ರಕ್ಷಿತ್‌ ಶೆಟ್ಟಿ ರಿಯಾಕ್ಟ್‌ ಮಾಡಿದ್ದಾರೆ. ನ್ಯಾಯಸ್ಥಾನದಲ್ಲಿಯೇ ನಿರ್ಧಾರವಾಗಲಿ. ನ್ಯಾಯಾಲಯದ ಮೊರೆ ಹೋಗುತ್ತಿದ್ದೇವೆ ಎಂದು ಪರಂವ ಸ್ಟೂಡಿಯೋಸ್‌ ಪ್ರತಿಕ್ರಿಯೆ ನೀಡಿದೆ. ಕಾನೂನು ಹೋರಾಟ ಮಾಡುವುದಾಗಿ ರಕ್ಷಿತ್‌ ಶೆಟ್ಟಿ ಸುದೀರ್ಘ ಪತ್ರ ಬರೆದಿದ್ದಾರೆ.

ನಾವು ಈ ಬಹಿರಂಗ ಪತ್ರವನ್ನು MRT ಮ್ಯೂಸಿಕ್‌ ಸಂಸ್ಥೆ ನಮ್ಮ ಮೇಲೆ ಎರಡು ಹಾಡಿನ ಹಕ್ಕು ಉಲ್ಲಂಘಟನೆಯ ಆರೋಪ ಮಾಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಲು ಬರೆದಿದ್ದೇವೆ. ಈ ಮುಂಚೆ ಅಂದರೆ ಬ್ಯಾಚುಲರ್‌ ಪಾರ್ಟಿ ಸಿನಿಮಾ ತೆರೆ ಕಾಣುವುದಕ್ಕೂ ಮುನ್ನವೇ ನಾವು ಎಂ.ಆರ್‌ ಟಿ ಸಂಸ್ಥೆಯ ಮುಖ್ಯಸ್ಥರೊಂದಿಗೆ ಈ ಕುರಿತು ಮಾತುಕತೆ ನಡೆಸಿದ್ದೇವು. ಆದರೆ ಅವರು ನಮ್ಮ ಮುಂದೆ ಇಟ್ಟ ಶುಲ್ಕ ನಮ್ಮ ಬಜೆಟ್‌ ಅನ್ನು ಮೀರಿತ್ತು. ಎಂಆರ್‌ ಟಿ ಸಂಸ್ಥೆ ಶುಲ್ಕದ ಕುರಿತಾಗಿ ಮರು ಮಾತುಕತೆಗೆ ತಯಾರಿರಲಿಲ್ಲ. ಈಗ ನಮ್ಮ ಮೇಲೆ ಹಾಡಿನ ಉಲ್ಲಂಘಟನೆಯ ಆರೋಪ ಬಂದಿದ್ದು, ದೂರು ದಾಖಲಾಗಿದೆ. ಇದು ನಿಜವಾಗಿಯೂ ಹಾಡಿನ ಹಕ್ಕು ಉಲ್ಲಂಘಟನೆಯೇ..? ಹೌದಾಗಿದ್ದಲ್ಲಿ ನಾವು ತರಬೇಕಾದ ದಂಡವಾದರೂ ಎಷ್ಟು..? ಯಾಕೆಂದರೆ ಎಂಆರ್‌ ಟಿ ಸಂಸ್ಥೆಯಿಂದ ಕೇಳಲ್ಪಟ್ಟದ್ದು ಬೃಹತ್‌ ಮೊತ್ತ ಎಂದರೆ ತಪ್ಪಾಗಲಾರದು. ಅಲ್ಲವಾದರೆ ಈ ತರಹದ ಆರೋಪವನ್ನು ಈಗಾಗಗಲ ಅಥವಾ ಮುಂಬರುವ ದಿನಗಳಲ್ಲಾಗಲಿ ಹೇಗೆ ಸಹಿಸಿಕೊಳ್ಳುವುದು. ಇದೊಂದು ಯಕ್ಷ ಪ್ರಶ್ನೆ. ಇದಕ್ಕೆ ಉತ್ತರ ನಾವು ಹುಡುಕ ಬಯಸುತ್ತೇವೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಹಾಗಾಗಿ ನ್ಯಾಯ ಮತ್ತು ಪ್ರಭುದ್ಧತೆಯನ್ನು ಕಾಪಾಡಿಕೊಳ್ಳಲು ನಾವು ಇದನ್ನು ನ್ಯಾಯಸ್ಥಾನದಲ್ಲಿಯೇ ನಿರ್ಧಾರವಾಗಲಿ ಎಂದು ನ್ಯಾಯಾಲಯದ ಮೊರೆ ಹೊಗುತ್ತಿದೇವೆ. ಇದರಿಂದ ಇನ್ನು ಮುಂಬರುವ ದಿನಗಳಲ್ಲಿ ನಮಗಷ್ಟೇ ಅಲ್ಲ ಬೇರೆ ಇನ್ಯಾವ ಸಿನಿಮಾ ಕರ್ಮಿಗೂ ಈ ಪರಿಸ್ಥಿತಿ ಹಾಗೂ ಗೊಂದಲ ಎದುರಾಗಬಾರದೆಂದು ನಮ್ಮ ಈ ಪ್ರಾಮಾಣಿಕ ಪ್ರಯತ್ನ ಎಂದು ಪರಂವ ಸ್ಟುಡಿಯೋಸ್‌ ಪತ್ರದ ಮೂಲಕ ಉತ್ತರಿಸಿದ್ದಾರೆ.

Tags: