ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣಾ ಅವರ ಡೀಪ್ ಫೇಕ್ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಅಗಿತ್ತು. ಈ ಬಗ್ಗೆ ಹಲವು ತಾರೆಯರು ದನಿ ಎತ್ತಿದ್ದರು. ಇದು ಮತ್ತೆ ಮರುಕಳಿಸಬಾರದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು, ಜಾಲತಾಣಗಳಲ್ಲಿ ಇಂತಹ ಕೃತ್ಯಗಳು ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು.
ಇದೀಗ ಡೀಪ್ ಫೇಕ್ ಬಗ್ಗೆ ರಕ್ಷಿತ್ ಶೆಟ್ಟಿ ಸಂದರ್ಶನವೊಂದರಲ್ಲಿ ಮಾತನಾಡಿದ್ದು, ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು .ವಿಡಿಯೋ ವೈರಲ್ ಆಗುವ ಮೊದಲೇ ಅದಕ್ಕೆ ಕಡಿವಾಣ ಹಾಕುವ ಕೆಲಸ ಆಗಬೇಕು. ಇಂತಹ ಕೃತ್ಯಗಳಿಂದ ಏನು ಬೇಕಾದರೂ ಆಗಬಹುದು. ಸೂಕ್ತ ನಿಯಮಗಳೊಂದಿಗೆ ಇಂತಹ ಸಾಫ್ಟ್‌ವೇರ್ ಬರಬೇಕು. ಇಲ್ಲದಿದ್ದರೆ ಸಮಸ್ಯೆಗಳು ಕಟ್ಟಿಟ್ಟ ಬುತ್ತಿ ಎಂದಿದ್ದಾರೆ.
ಕೆಲ ದಿನಗಳ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರು ತುಂಡುಡುಗೆ ಧರಿಸಿ ಲಿಫ್ಟ್ ಪ್ರವೇಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಅಸಲಿಗೆ ಜರಾ ಪಟೇಲ್ ಎಂಬ ಯುವತಿಯ ವಿಡಿಯೋಗೆ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಡೀಪ್ ಫೇಕ್ ತಂತ್ರಜ್ಞಾನ ಬಳಸಿ ಮಾರ್ಪ್ ಮಾಡಲಾಗಿತ್ತು. ಈ ಕುರಿತು ಪತ್ರಕರ್ತ ಅಮಿತ್ ಫ್ಯಾಕ್ಟ್ ಚೆಕ್ ಮಾಡಿ ಇದು ಡೀಪ್ ಫೇಕ್ ವಿಡಿಯೋ ಎಂದು ಸ್ಪಷ್ಟನೆ ನೀಡಿದ್ದರು.





