ಬೆಂಗಳೂರು : ಜಾಕ್ವೆಲಿನ್ ಫರ್ನಾಂಡಿಸ್ ಅವರು ಇಂದು ದೆಹಲಿಯ ಜಾರಿ ನಿರ್ದೇಶನಾಲಾಯದ ಮುಂದೆ ಹಾಜರಾದರು. ಎರಡು ಬಾರಿ ನೋಟಿಸ್ ನೀಡಿದ್ದರೂ ಕೇರ್ ಮಾಡದ ಫರ್ನಾಂಡಿಸ್ ಇಂದು ವಿಧಿ ಇಲ್ಲದೆ ಅನಿವಾರ್ಯವಾಗಿ ಇಡಿ ಮುಂದೆ ಹಾಜರಾದರು.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಳಿಗ್ಗೆ 8.30 ಗಂಟೆಗೆ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ವಿಚಾರಣೆ ಆರಂಭಿಸಿದರು. ಈ ವಿಚಾರಣೆ ರಾತ್ರಿ ತನಕ ನಡೆಯುವ ಸಾಧ್ಯತೆ ಇದೆ. ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪ ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್ ರಿಂದ ಜಾಕ್ವೆಲಿನ್ ಫರ್ನಾಂಡಿಸ್ ಕೋಟಿ ಕೋಟಿ ಹಣವಷ್ಟೆ ಅಲ್ಲದೆ ಬೆಲೆ ಬಾಳುವ ಗಿಫ್ಟ್ ಗಳನ್ನು ಪಡೆದಿದ್ದಾರೆ.
ಸುಕೇಶ್ ಚಂದ್ರಶೇಖರ್ ಅವರಿದೆ ಜಾಕ್ವೆಲಿನ್ ಫರ್ನಾಂಡಿಸ್ 2.5 ಕೋಟಿ ಮೌಲ್ಯದ ಐಷರಾಮಿಯ ಮೂರು ಕಾರು, ದುಬಾರಿ ಮೊಬೈಲ್ ಫೋನ್ ಗಳು, ಒಂದು ಜೋಡಿ ಲೂಯಿ ವಿಟಾನ್ ಶೂಗಳು, ಗುಸ್ಸಿ ಹಾಗೂ ಶನೆಲ್ ನಿಂದ ಡಿಸೈನರ್ ಬ್ಯಾಗ್ ಗಳು, ನಾಲ್ಕು ಪರ್ಷಿಯನ್ ಬೆಕ್ಕುಗಳು ಸೇರಿದಂತೆ ಹಲವು ಕಾಸ್ಲ್ಟಿ ವಸ್ತುಗಳನ್ನು ಪಡೆದಿದ್ದರು.
ಈ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ. ಸದ್ಯ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಹತ್ತಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ ಗಳನ್ನು ಎದುರಿಸುತ್ತಿದ್ದಾರೆ.