ಬೆಂಗಳೂರು : ಪೂರ್ಣಚಂದ್ರ ಮೈಸೂರು ಮುಖ್ಯಭೂಮಿಕೆಯಲ್ಲಿ ನಟಿಸಿರುವ ʼಆರ್ಕೆಸ್ಟ್ರಾ, ಮೈಸೂರುʼ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಂಡು ಒಂದು ತಿಂಗಳು ಕಳೆಯುವ ಮುನ್ನವೇ ಒಟಿಟಿಯತ್ತ ಮುಖ ಮಾಡಿದ್ದು, ಒಟಿಟಿ ವೇದಿಕೆಯಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವ ಬಗ್ಗೆ ಡಾಲಿ ಪಿಕ್ಚರ್ಸ್ ಮಾಹಿತಿ ಹಂಚಿಕೊಂಡಿದೆ.
ʼಆರ್ಕೆಸ್ಟ್ರಾ ಮೈಸೂರುʼ ಸಿನಿಮಾ ಜನವರಿ 12ರಂದು ತೆರೆಗೆ ಬಂದಿತ್ತು. ಟ್ರೈಲರ್ ಮತ್ತು ಹಾಡುಗಳ ಮೂಲಕ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಿಡುಗಡೆಯಾದ ಮೊದಲ ದಿನವೇ ಚಿತ್ರಕ್ಕೆ ಪ್ರೇಕ್ಷಕರ ಕೊರತೆ ಎದುರಾಗಿದೆ ಎಂದು ನಿರ್ಮಾಪಕ ರಘು ದಿಕ್ಷಿತ್ ಅಳಲು ತೋಡಿಕೊಂಡಿದ್ದರು. ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋಲನುಭವಿಸಿದ ಹಿನ್ನೆಲೆಯಲ್ಲಿ ತೆರೆಕಂಡ 15 ದಿನಕ್ಕೆ ಒಟಿಟಿಯಲ್ಲಿ ಬಿಡುಗಡೆ”
We are excited to share that #OrchestraMysuru digital rights have been acquired by @PrimeVideoIN. The film is available to stream starting today!! ಎಲ್ಲರೂ ನೋಡಿ, ನಿಮ್ಮ ಅಭಿಪ್ರಾಯ ತಿಳಿಸಿ. pic.twitter.com/z37cRBjuJF
— Daali Pictures (@daali_pictures) January 27, 2023
ಈ ಬಗ್ಗೆ ಟ್ವಿಟರ್‌ನಲ್ಲಿ ಪತ್ರವೊಂದನ್ನು ಹಂಚಿಕೊಂಡಿರುವ ಡಾಲಿ ಪಿಕ್ಚರ್ಸ್, ನಮ್ಮ ʼಆರ್ಕೆಸ್ಟ್ರಾ ಮೈಸೂರುʼ ತಂಡ ಕಥೆ ಹೇಳಬೇಕೆಂಬ ಕನಸು ಕಂಡವರು. ಮೈಸೂರಿನಲ್ಲೇ ಹುಟ್ಟಿ ಬೆಳೆದ, ಆರ್ಕೆಸ್ಟ್ರಾ ಸಂಸ್ಕೃತಿ ಮತ್ತು ಸಂಗೀತವುಳ್ಳ ಕಥೆಯೊಂದನ್ನು ಕನಸು ಕಾಣುವ ಪ್ರತಿಯೊಬ್ಬರಿಗೂ ಹತ್ತಿರವಾಗುವಂತಹ ಚಿತ್ರವಾಗಿಸಿ ತೋರಿಸಬೇಕೆಂದು ಮಾಡಿದ ಸಿನಿಮಾ, ‘ಆರ್ಕೆಸ್ಟ್ರಾ ಮೈಸೂರು’. ನಮ್ಮ ಈ ಕನಸನ್ನು ಬೆಳ್ಳಿ ಪರದೆಯಲ್ಲಿ ಆಸ್ವಾದಿಸಿದ ಅಷ್ಟೂ ಪ್ರೇಕ್ಷಕರಿಗೆ, ಕುಟುಂಬದವರಿಗೆ, ಗೆಳೆಯವರ್ಗಕ್ಕೆ ನಾವು ಮಣಿ. ಅದರಲ್ಲೂ, ಮೈಸೂರಿನ ಜನತೆ ʼಡಿಆರ್‌ಸಿʼ ಚಿತ್ರಮಂದಿರ ತುಂಬಿಸುವ ಮೂಲಕ ತೋರುತ್ತಿರುವ ವಿಶೇಷ ಪ್ರೀತಿಗೆ ನಾವು ಆಭಾರಿ. ಈಗ ಮುಂದಿನ ಹೆಜ್ಜೆ ನಮ್ಮ ಸಿನಿಮಾ ನೋಡಿ ಮೆಚ್ಚಿದ ʼಅಮೆಜಾನ್ ಪ್ರೈಂʼ ಸಂಸ್ಥೆ ಇದೀಗ ಚಿತ್ರವನ್ನು ಪ್ರಸಾರ ಮಾಡಲು ಮುಂದೆ ಬಂದಿದೆ. ಮತ್ತಷ್ಟು ಚಿತ್ರರಸಿಕರನ್ನು ತಲುಪಲು ‘ಆರ್ಕೆಸ್ಟ್ರಾ ಮೈಸೂರು’ ಚಿತ್ರ ಜನವರಿ 27ರಿಂದ ಪ್ರೈಂ ವಿಡಿಯೋಸ್‌ನಲ್ಲಿ ಬರಲಿದೆ. ಸಿನಿಮಾ ನೋಡಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ” ಎಂದು ಮಾಹಿತಿ ನೀಡಿದೆ.