ಮೈಸೂರು: ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಈಚೆಗೆ ನಡೆದ ಎರಡನೇ ಕರ್ನಾಟಕ ಅಂತರ ನಡೆದ ಎರಡನೇ ಕರ್ನಾಟಕ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಒಡನಾಡಿ ಕನ್ನಡ ಚಲನಚಿತ್ರಕ್ಕೆ ಉತ್ತಮ ಸಾಮಾಜಿಕ ಕಥಾಚಿತ್ರ ಪ್ರಶಸ್ತಿ ಲಭಿಸಿದೆ.
ನವಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಅವರು ಚಿತ್ರದ ನಿರ್ದೇಶಕ ಮೈಸೂರು ವೆಂಕಟೇಶ್ ಅವರಿಗೆ ಪ್ರಶಸ್ತಿ ನೀಡಿದರು.ನಗರದ ಹನುಮಾ ಕ್ರಿಯೇಷನ್ ಸಂಸ್ಥೆ ನಿರ್ಮಿಸಿರುವ ಈ ಚಿತ್ರ ಲೇಖಕ ಸ್ಟ್ಯಾನ್ಲಿ ಪರಶು ಅವರ ಒಡನಾಡಿ ಒಡಲಾಳ ಕೃತಿಯನ್ನು ಆಧರಿಸಿದೆ. ಚಿತ್ರಕ್ಕೆ ಜುಬಿನ ಪೌಲ್ ಹಿನ್ನಲೆ ಸಂಗೀತ, ಪ್ರಿಯಾಶಂಕರ್ ಸಂಕಲನ, ಅಮರನಾಥ್ ಮತ್ತು ವಿನೋದ್ ಕುಮಾರ್ ಛಾಯಾಗ್ರಹಣ ನೀಡಿದ್ದಾರೆ. ತಾರಾಬಳಗದಲ್ಲಿ ರಾಜ್ ಬನಾವತ್, ಶಹನ್ ಪೊನ್ನಮ್ಮ, ಶಂಕರ್ ಅಶ್ವಥ್,ವಿ.ಜೆ.ಮಿಂಚು, ರಂಜನ್ ಶೆಟ್ಟಿ, ಮೈಸೂರು ರಮಾನಂದ್, ನಾಗಭೂಷಣ್, ರಾಧಾ, ಉದಯ್ ಕುಮಾರ್ ಹಾಜರಿದ್ದರು.





