Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಮತ್ತೆ ಸಿನಿಮಾದಲ್ಲಿ ಬ್ಯುಸಿಯಾದ ನಿಖಿಲ್‌ ಕುಮಾರಸ್ವಾಮಿ : ಆಗಸ್ಟ್ 23ಕ್ಕೆ ಚಿತ್ರದ ಮುಹೂರ್ತ

ಜಾಗ್ವಾರ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ನಿಖಿಲ್ ಬಳಿಕ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ಮಿಂಚಿದರು. ಕುರುಕ್ಷೇತ್ರ ಚಿತ್ರದಲ್ಲಿ ಅಭಿಮನ್ಯು ಪಾತ್ರದಲ್ಲಿ ಗಮನ ಸೆಳೆದರು.

2 ವರ್ಷದ ಹಿಂದೆ ಬಂದ ರೈಡರ್ ಸಿನಿಮಾ ಪ್ರೇಕ್ಷಕರ ಮನಗೆದ್ದರೂ ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿತ್ತು. ಆ ಬಳಿಕ ಯಾವುದೇ ಸಿನಿಮಾದಲ್ಲಿ ನಿಖಿಲ್ ನಟಿಸಲಿಲ್ಲ.

ರಾಜ್ಯ ವಿಧಾನಸಭೆ ಚುನಾವಣಾ ಹಿನ್ನೆಲೆಯಲ್ಲಿ ಚಿತ್ರರಂಗದಿಂದ ದೂರವಿದ್ದ ನಿಖಿಲ್ ಕುಮಾರಸ್ವಾಮಿ ಮತ್ತೆ ಸಿನಿಮಾ ನಟನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಚುನಾವಣೆಗೂ ಮುನ್ನ ಎರಡು ಚಿತ್ರಗಳನ್ನು ಅವರು ಒಪ್ಪಿಕೊಂಡಿದ್ದರೂ, ಎರಡಕ್ಕೂ ಶೂಟಿಂಗ್ ಗಾಗಿ ಗ್ರೀನ್ ಸಿಗ್ನಲ್ ಕೊಟ್ಟಿರಲಿಲ್ಲ.

ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟಿಸುವ ಹೊಣೆ ಹೊತ್ತಿದ್ದರಿಂದ ಚಿತ್ರೀಕರಣದಲ್ಲಿ ಭಾಗಿಯಾಗಿರಲಿಲ್ಲ. ಚುನಾವಣೆ ಮುಗಿದ ಕಾರಣದಿಂದಾಗಿ ಮತ್ತೆ ಚಿತ್ರರಂಗದತ್ತ ನಿಖಿಲ್ ಮುಖ ಮಾಡಿದ್ದಾರೆ.

ದಕ್ಷಿಣ ಭಾರತದ ಶ್ರೀಮಂತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಇದೀಗ ನಿಖಿಲ್ ಅವರ ಸಿನಿಮಾ ನಿರ್ಮಾಣ ಮಾಡಲು ಮುಂದೆ ಬಂದಿದೆ. ನಿಖಿಲ್ ಕೂಡ ಈ ಕಂಪೆನಿಯಲ್ಲಿ ಕೆಲಸ ಮಾಡಲು ಒಪ್ಪಿಕೊಂಡಿದ್ದರಿಂದ ಹೊಸ ಚಿತ್ರಕ್ಕೆ ಆಗಸ್ಟ್ 23 ರಂದು ಚಾಲನೆ ನೀಡಲಾಗುತ್ತಿದೆ. ತಮಿಳಿನಲ್ಲಿ ದುಬಾರಿ ಬಜೆಟ್ ಸಿನಿಮಾ ಮಾಡಿದ ಲೈಕಾ ಇದೀಗ ಕನ್ನಡದ ನಟನ ಮೇಲೆ ಹಣ ಹೂಡುತ್ತಿದೆ.

ಬಹಳ ಅದ್ಧೂರಿಯಾಗಿ ನಿಖಿಲ್ 4ನೇ ಸಿನಿಮಾ ಶುರುವಾಗಲಿದೆ. ಚಿತ್ರದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಘಟಾನುಘಟಿ ಕಲಾವಿದರು, ತಂತ್ರಜ್ಞರು ಕೆಲಸ ಮಾಡಲಿದ್ದಾರೆ. 5 ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಲಿದೆ. ಬಹುಕೋಟಿ ವೆಚ್ಚದಲ್ಲಿ ಈ ಪ್ರಾಜೆಕ್ಟ್ ಸಿದ್ಧವಾಗಲಿದೆ. ಪರಭಾಷೆಯ ನಿರ್ದೇಶಕರು ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಸಾಧ್ಯತೆಯಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ