ಜೀ ಕುಂಟುಂಬ ಅವಾಡ್ಸ್ 2023 ವೇದಿಕೆಯಲ್ಲಿ ನಟ ಅಶೋಕ್ ಬಾಲ್ಯದ ಗೆಳೆಯ ಯಶ್ ಹಾಗೂ ತಮ್ಮ ನಡುವಿನ ಸ್ನೇಹವನ್ನು ನೆನೆದಿದ್ದಾರೆ.
ಜೀ ಕುಟುಂಬ ಅವಾರ್ಡ್ಸ್ 2023 ರಲ್ಲಿ ನೆಚ್ಚಿನ ಸ್ನೇಹಿತ ಅವಾರ್ಡ್ ಸ್ವೀಕರಿಸಿದ ಬಳಿಕ ಮಾತನಾಡಿದ ಅಶೋಕ್ ತಮ್ಮ ಆತ್ಮೀಯ ಗೆಳೆಯ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮಾತನಾಡಿದ್ದು,ಇವತ್ತು ಸಿನಿಮಾ ರಂಗದಲ್ಲಿ ನನಗೊಂದು ಹೆಸರು ಬಂದಿದೆ ಅಂದ್ರೆ ಅದಕ್ಕೆ ನನ್ನ ಗಳೆಯ ಯಶ್ ಕಾರಣ. ನನ್ನ ಹಾಗೂ ಯಶ್ ಸ್ನೇಹ ಬಹಳ ಹಳೆಯದು. ಯಶ್ ನನಗಿಂತ ಎರಡು ವರ್ಷ ಚಿಕ್ಕವನು, ನಾನು ಫಸ್ಟ್ ಇಯರ್ ಬಿ.ಕಾಂ ನಲ್ಲಿದ್ದಾಗ ಅವನು ಫಸ್ಟ್ ಪಿಯುಸಿ ಓದುತ್ತಿದ್ದ. ನಾವಿಬ್ರೂ ಒಂದೇ ಡ್ಯಾನ್ಸ್ ಗ್ರೂಪ್ ನಲ್ಲಿ ಡ್ಯಾನ್ಸ್ ಮಾಡ್ತಿದ್ವಿ. ಲಗಾನ್ ಚಿತ್ರದ ಮಿತ್ವಾ ಓ ಮಿತ್ವಾ ಹಾಡಿಗೆ ನಾವಿಬ್ರೂ ಡ್ಯಾನ್ಸ್ ಮಾಡಿದ್ವಿ. ಆ ಹಾಡಿನಲ್ಲಿ ಅಮೀರ್ ಖಾನ್ ಒಬ್ಬ ಹುಡುಗನನ್ನು ತಮ್ಮ ತೊಡೆಯ ಮೇಲೆ ಕೂರಿಸಿಕೊಳ್ಳುತ್ತಾರೆ. ಅದೇ ರೀತಿ ನಾನು ಯಶ್ ನ ನನ್ನ ತೊಡೆ ಮೇಲೆ ಕುರಿಸಿಕೊಂಡಿದ್ದೆ. ಎಂದು ತಮ್ಮ ಸ್ನೇಹವನ್ನು ಮೆಲುಕು ಹಾಕಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸೀತಾ ರಾಮ ಧಾರಾವಾಹಿ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಪ್ರೇಕ್ಷಕರು ಪ್ರತಿಯೋಂದು ಪಾತ್ರವನ್ನೂ ಕೂಡ ಬಿಗಿದಪ್ಪಿಕೊಳ್ಳುತ್ತಿದ್ದಾರೆ. ಸೀತಾ ರಾಮ ಧಾರವಾಹಿಯಲ್ಲಿನ ರಾಮ್ ಹಾಗೂ ಅಶೋಕ್ ಸ್ನೇಹ ನೋಡುಗರನ್ನು ಮೋಡಿ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಸ್ನೇಹ ಅಂದ್ರೆ ಹೀಗಿರ್ಬೇಕು ಆಂತಾ ಇವರಿಬ್ಬರ ವಿಡಿಯೋ ತುಣುಕುಗಳು ಹರಿದಾಡುತ್ತಿರುತ್ತವೆ.
ಅಂತೆಯೇ ಈ ಬಾರಿಯ ಜೀ ಕುಟುಂಬ ಅವಾರ್ಡ್ಸ್ 2023 ಕಾರ್ಯಕ್ರಮದಲ್ಲಿ ಅಶೋಕ್ ಅವರು ನೆಚ್ಚಿನ ಸ್ನೇಹಿತ ಅವಾರ್ಡ್ ಪಡೆದುಕೊಂಡಿದ್ದಾರೆ.ಈ ವೇಳೆ ತಮ್ಮ ಬಾಲ್ಯದ ಗೆಳೆಯ ಯಶ್ ಜೊತೆಗಿನ ತಮ್ಮ ನೆನಪುಗಳನ್ನು ಮೆಲುಕು ಹಾಕಿದ್ದಾರೆ.