Mysore
29
clear sky

Social Media

ಗುರುವಾರ, 29 ಜನವರಿ 2026
Light
Dark

ಪದ್ಮಶ್ರೀ ಪುರಸ್ಕೃತ ಸಂಗೀತ ಮಾಂತ್ರಿಕ ರಶೀದ್‌ ಖಾನ್‌ ನಿಧನ

ಖ್ಯಾತ ಶಾಸ್ತ್ರೀಯ ಸಂಗೀತಗಾರ, ಸಂಗೀತ ಮಾಂತ್ರಿಕ ರಶೀದ್‌ ಖಾನ್‌ ಇಂದು ( ಜನವರಿ 9 ) ಕೊಲ್ಕತ್ತಾದ ಪೀರ್ಲೆಸ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಳೆದ ವರ್ಷ ಸೆರೆಬ್ರಲ್‌ ಅಟ್ಯಾಕ್‌ಗೆ ಒಳಗಾಗಿದ್ದ ರಶೀದ್‌ ಖಾನ್‌ ಕಳೆದ ಕೆಲ ತಿಂಗಳುಗಳಿಂದ ವೆಂಟಿಲೇಟರ್‌ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನಗಳಿಂದ ಚೆನ್ನಾಗಿಯೇ ಚಿಕಿತ್ಸೆಗೆ ಸ್ಪಂದಿಸಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದು 55 ವರ್ಷಕ್ಕೆ ಬಾಳಪಯಣವನ್ನು ಅಂತ್ಯಗೊಳಿಸಿದ್ದಾರೆ.

ಉತ್ತರ ಪ್ರದೇಶದ ಬಡಾಯುನ್‌ನಲ್ಲಿ ಜುಲೈ 1, 1968ರಲ್ಲಿ ಜನಿಸಿದ್ದ ರಶೀದ್‌ ಖಾನ್‌ ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳ ಜತೆಗೆ ಸಂಗೀತ್‌ ನಾಟಕ್‌ ಅಕಾಡೆಮಿ ಗೌರವವನ್ನೂ ಸಹ ಪಡೆದಿದ್ದಾರೆ. ಹಿಂದೂಸ್ತಾನಿ ಸಂಗೀತ ಸಂಪ್ರದಾಯದ ಶಾಸ್ತ್ರೀಯ ಸಂಗೀತಗಾರರಾಗಿದ್ದ ರಶೀದ್ ಖಾನ್‌ ನಿಧನ ಸುದ್ದಿಗೆ ವಿವಿಧ ಕ್ಷೇತ್ರಗಳ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದು, ಸಂಜೆ 6 ಗಂಟೆಯವರೆಗೆ ಪೀರ್ಲೆಸ್‌ ಆಸ್ಪತ್ರೆಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿದ್ದು, ಬಳಿಕ ಪಾರ್ಥಿವ ಶರೀರವನ್ನು ಕೊಲ್ಕತ್ತಾದ ಪೀಸ್‌ ಹೆವನ್‌ಗೆ ಕಳುಹಿಸಲಾಗುವುದು ಹಾಗೂ ನಾಳೆ ( ಜನವರಿ 10 ) ಅಂತ್ಯಕ್ರಿಯೆ ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!