Mysore
29
clear sky

Social Media

ಸೋಮವಾರ, 02 ಫೆಬ್ರವರಿ 2026
Light
Dark

ಕೆಜಿಎಫ್‌ 3 ಸ್ಕ್ರಿಪ್ಟ್‌ ರೆಡಿ : ಪ್ರಶಾಂತ್‌ ನೀಲ್‌

ಯಶ್‌ ಹಾಗೂ ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ ನ ಕೆಜಿಎಫ್‌ ಸಿನಿಮಾ ಪ್ಯಾನ್‌ ಇಂಡಿಯಾ ಲೆವೆಲ್‌ ನಲ್ಲಿ ಕಮಾಲ್‌ ಮಾಡುವ ಮೂಲಕ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿತ್ತು.

ಕೆಜಿಎಫ್‌ ಸಿನಿಮಾ ಸರಣಿಗಳು ಬಂದು ಹೋದ ಮೇಲೆ ರಾಕಿ ಬಾಯ್‌ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾದು ಕಾದು ಸುಸ್ತಾಗಿದ್ದಾರೆ. ಈ ನಡುವೆ ಆಗಾಗ ಯಶ್‌ ಮುಂದಿನ ಸಿನಿಮಾ ಬಗ್ಗೆ ಗಾಳಿ ಸುದ್ದಿಗಳು ಹರಿದಾಡುತ್ತಿರುತ್ತವೆ. ಕೆಜಿಎಫ್‌ 3 ಬರುತ್ತೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿರುತ್ತದೆ. ಈ ಊಹಾ ಪೋಹಗಳಿಗೆ ಪುಷ್ಟಿ ನೀಡುವಂತೆ, ಪ್ರಶಾಂತ್‌ ನೀಲ್‌ ಅವರು ಆಂಗ್ಲ ಮಾಧ್ಯಮವೊಂದಕ್ಕೆ ಕೆಜಿಎಫ್‌ 3 ಬಗ್ಗೆಗಿನ ಮಾಹಿತಿ ಹಂಚಿಕೊಂಡಿದ್ದು, ಸ್ಕ್ರಿಪ್ಟ್‌ ರೆಡಿ ಇದೆ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.

ನಾಳೆ ಯಶ್‌ ಅವರ ಮುಂದಿನ ಸಿನಿಮಾದ ಟೈಟಲ್‌ ಅನೌನ್ಸ್‌ ಆಗಲಿದ್ದು. ರಾಕಿಂಗ್‌ ಸ್ಟಾರ್‌ ಮುಂದಿನ ಸಿನಿಮಾ ಯಾವುದು ಎನ್ನುವ ಅಭಿಮಾನಿಗಳ ಕುತೂಹಲಕ್ಕೆ ತೆರೆ ಬೀಳಲಿದೆ. ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಮ್‌ ಪ್ರೊಫೈಲ್‌ ಫೋಟೋ ಬದಲಿಸಿದ್ದ ಯಶ್‌ ಲೋಡಿಂಗ್‌ ಎಂಬ ಬರಹವಿರುವ ಫೊಟೋವನ್ನು ಅಪ್ಲೋಡ್‌ ಮಾಡಿದ್ದರು. ಇದರಿಂದ ಅಭಿಮಾನಿಗಳಲ್ಲಿ ಯಶ್‌ ತಮ್ಮ ಮುಂದಿನ ಚಿತ್ರದ ಅಪ್ಡೇಟ್‌ ನೀಡಿದ್ದಾರಾ ? ಎಂಬ ಕುತೂಹಲ ಮೂಡಿತ್ತು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಕ್ವೆಶ್ಚನ್‌ ಮಾರ್ಕ್‌ ಇರುವ ಫೊಟೋವೊಂದನ್ನು ಹಂಚಿಕೊಂಡು ಡಿಸೆಂಬರ್‌ 8 ಕ್ಕೆ ತಮ್ಮ ಮುಂದಿನ ಸಿನಿಮಾದ ಟೈಟಲ್‌ ಅನೌನ್ಸ್‌ ಮಾಡುವುದಾಗಿ ಯಶ್‌ ಹೇಳಿಕೊಂಡಿದ್ದರು.

ಇದೀಗ ಎಲ್ಲಾ ಸಿನಿರಸಿಕರ ಚಿತ್ತ ಯಶ್‌ ಮುಂದಿನ ಸನಿಮಾದತ್ತ ನೆಟ್ಟಿದೆ. ಅಭಿಮಾನಿಗಳೆಲ್ಲರೂ ಕೂಡ ನಾಳೆ ಅನೌನ್ಸ್‌ ಆಗಲಿರುವ ರಾಕಿ ಬಾಯ್‌ ಮುಂದಿನ ಸಿನಿಮಾ ಅಪ್ಡೇಟ್‌ ಗಾಗಿ ಕಾತುರದಿಂದ ಕಾಯುತ್ತಾರೆ. ರಾಕಿಂಗ್‌ ಸ್ಟಾರ್ ಮುಂದಿನ ಸಿನಿಮಾ ಯಾವುದು ಅಂತಾ ನಾಳೆಯಷ್ಟೇ ತಿಳಿಯಬೇಕಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!