ಧರ್ಮದ ಏಟಿನಿಂದ ತಪ್ಪಿಸಿಕೊಳ್ಳಬಹುದು ಆದರೆ ಕರ್ಮದ ಏಟಿನಿಂದ ತಪ್ಪಿಸಿಕೊಳ್ಳು ಸಾಧ್ಯವಿಲ್ಲ ಅಂತಾ ನೆಗಿಟಿವ್ ಕಮೆಂಟ್ ಮಾಡುವವರಿಗೆ ನಟ ಧನ್ವೀರ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಈಗಾಗಲೇ ಧನ್ವೀರ್ ಹಾಗೂ ಮೇಘಾ ಶೆಟ್ಟಿ ಅಭಿನಯದ ಕೈವ ಸಿನಿಮಾ ಬಿಡುಗಡೆಯಾಗಿದ್ದು, ಸಿನಿ ರಸಿಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಧನ್ವೀರ್ ಹಾಗೂ ಮೇಘಾ ಶೆಟ್ಟಿ ಅಭಿನಯದ ಕೈವ ಸಿನಿಮಾ 80 ರ ದಶಕದಲ್ಲಿನ ಬೆಂಗಳೂರು ಕರಗದ ವೇಳೆ ನಡೆದ ನೈಜ ಘಟನೆಯನ್ನು ಬಿಚ್ಚಿಡುತ್ತದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ವಿಮರ್ಶೆ ಜೋರಾಗಿದೆ. ಧನ್ವೀರ್ ಅವರಿಗೆ ಯಾವಾಗಲೂ ಸಪೋರ್ಟ್ ಮಾಡುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಫೋಟೋ ಬಳಸಿಕೊಂಡು ನೆಗಿಟಿವ್ ಕಮೆಂಟ್ ಮಾಡಲಾಗುತ್ತಿದೆ. ಹೇಗೆ ನೆಗಿಟಿವ್ ಕಾಮೆಂಟ್ ಮಾಡುತ್ತಿರುವವರ ಮೇಲೆ ನಟ ಧನ್ವೀರ್ ಬೇಸರ ಹೊರ ಹಾಕಿದ್ದಾರೆ.
ಧರ್ಮದ ಏಟಿನಿಂದ ತಪ್ಪಿಸಿಕೊಳ್ಳಬಹುದು. ಆದರೆ ಕರ್ಮದ ಏಟಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಾಧ್ಯಮಗಳಲ್ಲಿ ನಿಜವಾದ ವಿಮರ್ಶೆ ಕೊಡುವವರು ಸಿನಿಮಾ ಬಿಡುಗಡೆ ಆದಮೇಲೆ ಜನರ ಬಳಿ ಬಂದು ಕೇಳಿ ವಿಮರ್ಶೆ ಪಡೆಯುವವರು ನಿಜವಾದ ಸಿನಿ ಪ್ರೇಮಿಗಳು. ರಿವ್ಯೂವರ್ಸ್ ಅಂತಾ ಹೇಳಿಕೊಂಡು ಏನೇನೋ ಬರೆದುಕೊಂಡು ತುಳಿಯಲು ಪ್ರಯತ್ನಿಸುತ್ತಾರೆ. ಅಂತಹವರು ನಿಜವಾದ ಚಿತ್ರ ಪ್ರೇಮಿಗಳಲ್ಲ. ಹೊಟ್ಟೆ ಪಾಡಿಗಾಗಿ ಈ ರೀತಿಯ ಕೆಲಸ ಮಾಡಿಕೊಂಡು ಕೂರುತ್ತಾರೆ. ಯಾರೋ ಏನೋ ಹೇಳುತ್ತಾರೆ ಅಂತಾ ಸುದ್ದಿ ಮಾಡುತ್ತಾರೆ. ಏನು ಮಾಡುತ್ತಾರೋ ಮಾಡಲಿ. ಧರ್ಮಕ್ಕೂ ಕರ್ಮಕ್ಕೂ ಸಮಯ ಬರುತ್ತೆ ಅದಕ್ಕೆ ಕಾಯುತ್ತೀನಿ.
ನನ್ನ ಹಿಂದಿನ ಸಿನಿಮಾ ಸಮಯದಲ್ಲಿಯೂ ಕೂಡ ಇದೇ ರೀತಿ ಆಗಿತ್ತು. ಇರ್ಲಿ ಪರವಾಗಿಲ್ಲ, ಬೆಳೆಯುತ್ತಿದ್ದೀಯ, ಬೆಳೆದ ಮೇಲೆ ಕಾಂಟ್ರವರ್ಸಿ ಅನ್ನೋದು ಶುರುವಾಗುತ್ತೆ ತಲೆ ಕೆಡಿಸಿಕೊಳ್ಳಬೇಡ ಅಂತಾ ದೊಡ್ಡವರು ಹೇಳಿದ್ದಾರೆ ಅಂತಾ ನಟ ಧನ್ವೀರ್ ಹೇಳಿದ್ದಾರೆ.





