Mysore
17
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಕಾಂತಾರ-೧ ಮಹೋರ್ತ ನೆರವೇರಿಸಿದ ಚಿತ್ರತಂಡ: ಸಂಚಲ ಮೂಡಿಸುತ್ತಿರುವ ಫಸ್ಟ್‌ ಲುಕ್‌

ಬೇಂಗಳೂರು: ಕಾಂತಾರ ಚಿತ್ರ ಕನ್ನಡಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಮೂಡಿಸಿತ್ತು. ಭಾರತ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಚಿತ್ರ ಪ್ರೇಮಿಗಳನ್ನು ಆಕರ್ಷಿಸಿತ್ತು. ಇದೀಗ ಕಾಂತಾರ ಚಿತ್ರದ ಪ್ರೀಕ್ವೆಲ್‌ ಚಾಪ್ಟರ್‌-೧ ಟೀಸರ್‌ ಪೋಸ್ಟರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಇಂದು ಬೆಳಿಗ್ಗೆ ಕುಂದಾಪುರದ ಆನೆಗುಡ್ಡದ ಗಣಪತಿ ದೇವಸ್ಥಾನದಲ್ಲಿ ಚಿತ್ರತಂಡ ಚಿತ್ರದ ಮಹೋರ್ತ ಕಾರ್ಯವನ್ನು ನೆರವೇರಿಸಿದೆ. ಪೂಜೆ ಬಳಿಕೆ ಮಾಧ್ಯಮದೊಂದಿಗೆ ಮಾತನಾಡಿದ ಚಿತ್ರದ ನಿರ್ದೇಶಕ ರಿಷಬ್‌ ಶೆಟ್ಟಿ, ಚಿತ್ರದ ಚಿತ್ರೀಕರಣವನ್ನು ಡಿಸೆಂಬರ್‌ನಲ್ಲಿ ಪ್ರಾರಂಭ ಮಾಡುವುದಾಗಿ ತಿಳಿಸಿದ್ದಾರೆ.

ಕಾಂತಾರದ ಅಧ್ಯಾಯ ಒಂದು ಪ್ರಾರಂಭ ಮಾಡಿದ್ದೇವೆ. ಈ ಹಿಂದೆ ಕಾಂತಾರ ಚಿತ್ರಕ್ಕೆ ಕನ್ನಡದ ಜನತೆ ನೀಡಿದ ಬೆಂಬಲ ಪ್ರೋತ್ಸಾಹವನ್ನು ಕಾಂತಾರ-೧ ಚಿತ್ರಕ್ಕೂ ನೀಡಿ ಎಂದರು. ಕಾಂತಾರ ಚಿತ್ರಕ್ಕೆ ಸಿಕ್ಕ ಯಶಸನ್ನು ಜವಬ್ಧಾರಿಯಾಗಿ ಸ್ವೀಕರಿಸೆದ್ದೇವೆ. ಈ ಮೂಲಕ ಮತ್ತಷಟು ಒಳ್ಳೆಯ ಕೆಲಸಗಳನ್ನು ಮಾಡಲು ಮುಂದಾಗಿದ್ದೇವೆ ಎಂದು ರಿಷಬ್‌ ಶೆಟ್ಟಿ ತಿಳಿಸಿದರು.

ಕಾಂತಾರ-೧ಬಗ್ಗೆ ಮಾತನಾಡಿದ ರಿಷಬ್‌ ಶೆಟ್ಟಿ, ಚಿತ್ರದ ಬಗ್ಗೆ ನಾನೇನು ಹೇಳುವುದಿಲ್ಲ, ಚಿತ್ರವೇ ಮಾತನಾಡಬೇಕು. ಕರಾವಳಿ ಭಾಗಕ್ಕೆ ಸಂಬಂಧಪಟ್ಟ ಕಥೆಯಾದ್ದರಿಂದ ಹೆಚ್ಚಾಗಿ ಕರಾವಳಿ ಭಾಗದಲ್ಲೇ ಶೂಟಿ ಮಾಡಲು ನಿರ್ಧರ ಮಾಡಿದ್ದೇವೆ. ಚಿತ್ರದಲ್ಲಿ ಹೊಸಬರಿಗೆ ಆಧ್ಯತೆ ನೀಡಲಾಗಿದ್ದು ಕನ್ನಡಿಗರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸುತ್ತಿರುವ ಚಿತ್ರದ ಫಸ್ಟ್‌ ಲುಕ್‌:  ಇನ್ನು ಕಾಂತಾರ-೧ನ ಫಸ್ಟ್‌ ಲುಕ್‌ ಕೂಡ ಇಂದು ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದೆ. ಯೂಟ್ಯೂಬ್‌ನಲ್ಲಿ ಫಸ್ಟ್‌ ಲುಕ್‌ ಬಿಡುಗಡೆಯಾಗಿ ಕೇಲವು ಗಂಟೆಗೆ ೩ ಲಕ್ಷಕ್ಕು ಹೆಚ್ಚು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದು ಸುಮಾರು ೨೧.೫ಲಕ್ಷ ಮಂದಿ ವಿಕ್ಷಣೆ ಮಾಡಿದ್ದಾರೆ, ಈ ಮೂಲ ಈ ಹಿಂದಿನ ಚಿತ್ರಗಳ ದಾಖಲೆಗಳನ್ನು ಮುರಿಯುವತ್ತ ಸಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!