Mysore
28
few clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ʼಕಾಂತಾರʼ ಪ್ರದರ್ಶನಕ್ಕೆ ತಡೆಹಾಕಿ : ಮಂಗಳೂರು ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಮನವಿ

ಕಾಂತಾರ ಪ್ರದರ್ಶನಕ್ಕೆ ತಡೆಹಾಕುವಂತೆ ಮಂಗಳೂರು ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಮನವಿ
ಮಂಗಳೂರು
: ಕಾಂತಾರ ಸಿನಿಮಾ ಬಿಡುಗಡೆಯಾಗಿ 50 ದಿನಗಳೇ ಕಳೆದಿವೆ ಈ ನಡುವೆ, ಅಂತೆಯೇ ಈ ಸಿನಿಮಾ ಕುರಿತು ಸಾಕಷ್ಟು ಪರ -ವಿರೋಧಗಳು ವ್ಯಕ್ತವಾಗುತ್ತಲೇ ಇದೀಗ ಕಾಂತಾರ ಸಿನಿಮಾದಲ್ಲಿ ದಲಿತ ಸಮುದಾಯ ಮತ್ತು ಮಹಿಳೆಯರನ್ನು ಅವಹೇಳನ ಕಾರಿಯಾಗಿ ಬಿಂಬಿಸಲಾಗಿದೆ ಎಂದು  ಸಮತಾ ಸೈನಿಕ ದಳ ಮಂಗಳೂರು, ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಮನವಿ ಮಾಡಿಕೊಂಡಿದೆ.

ಈ ಸಂಬಂಧ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ಸಮತಾ ಸೈನಿಕ ದಳ, ‘ಇದೊಂದು ಉತ್ತಮ ಸಿನಿಮಾ ಮತ್ತು ಕಲಾವಿದರು ಚೆನ್ನಾಗಿ ಅಭಿನಯಿಸಿದ್ದಾರೆ. ಆದರೆ, ಈ ಸಿನಿಮಾದಲ್ಲಿ ಕೆಲವು ತಪ್ಪುಗಳು ಆಗಿವೆ. ಅವುಗಳನ್ನು ಸರಿಪಡಿಸಿಕೊಳ್ಳಬೇಕು. ಮಹಿಳೆಯರನ್ನು ಅವಮಾನಿಸಲಾಗಿದೆ, ಯುವಕರನ್ನು ಪೋಲಿಗಳು ಎನ್ನುವಂತೆ ತೋರಿಸಲಾಗಿದೆ. ದಲಿತ ಸಮುದಾಯಕ್ಕೆ ಅಪಮಾನ ಮಾಡಲಾಗಿದೆ. ದೈವರಾಧಾನೆ ಹೆಸರಿನಲ್ಲಿ ಹಿಂಸೆಯನ್ನೂ ಪ್ರಚೋದಿಸಲಾಗಿದೆ’ ಎಂದು ಆರೋಪವನ್ನು ಮಾಡಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ