ಕಾಟೇರ ಚಿತ್ರದ ಯಶಸ್ಸನ್ನು ಸಂಭ್ರಮಿಸಲು ನಟ ದರ್ಶನ್ ಸೇರಿದಂತೆ ಇನ್ನುಳಿದ ಕೆಲ ಕನ್ನಡ ನಟರು ಬೆಂಗಳೂರಿನ ಜೆಟ್ ಲಾಗ್ ರೆಸ್ಟೋ ಬಾರ್ ನಲ್ಲಿ ತಡರಾತ್ರಿವರೆಗೂ ಪಾರ್ಟಿ ನಡೆಸಿದ್ದರು.
ಈ ಸಂಬಂಧ ಸುಬ್ರಮಣ್ಯನಗರ ಪೊಲೀಸರು ದರ್ಶನ್ ಸೇರಿದಂತೆ ಹಲವರ ವಿಚಾರಣೆ ನಡೆಸಿದ್ದರು. ಇದೀಗ ಅವಧಿ ಮೀರಿ ಪಾರ್ಟಿ ಮಾಡಲು ಅವಕಾಶ ನೀಡಿದ್ದ ಜೆಟ್ ಲಾಗ್ ಪಬ್ ನ ಪರವಾನಗಿಯನ್ನು 25 ದಿನಗಳ ಕಾಲ ರದ್ದು ಮಾಡಿ ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ.





