Mysore
18
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ರಜನಿ ಯೋಗಿ ಕಾಲು ಮುಟ್ಟಿ ನಮಸ್ಕರಿಸಿದ್ದು ತಪ್ಪಲ್ಲ : ಅಣ್ಣಾಮಲೈ ಸಮರ್ಥನೆ

ಸೂಪರ್ ಸ್ಟಾರ್ ರಜನಿಕಾಂತ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿದ ವಿಚಾರ ಸಾಕಷ್ಟು ಸುದ್ದಿಯಾಗಿತ್ತು. ಹಿರಿಯರಾದ ರಜನಿಕಾಂತ್ ಕಿರಿಯರೊಬ್ಬರ ಕಾಲು ಮುಟ್ಟಿ ನಮಸ್ಕಾರ ಮಾಡಿದ್ದು ತಮಿಳಿನ ಅಸ್ಮಿತೆಗೆ ಧಕ್ಕೆಯಾಗಿದೆ ಎಂದು ಬಣ್ಣಿಸಲಾಗಿತ್ತು. ಈ ಕುರಿತು ತಮಿಳು ನಾಡಿನ ಬಿಜೆಪಿ ಅಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಮಾತನಾಡಿದ್ದು. ಯೋಗಿ ಆದಿತ್ಯನಾಥ್ ಅವರು ಯೋಗಿ ಆಗಿದ್ದರಿಂದ ಕಾಲು ಮುಟ್ಟಿ ನಮಸ್ಕರಿಸುವುದರಲ್ಲಿ ತಪ್ಪೇನೂ ಇಲ್ಲ ಎಂದಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಪ್ರವಾಸ ಮುಗಿಸಿಕೊಂಡು ಚೆನ್ನೈಗೆ ವಾಪಸ್ಸಾಗಿರುವ ರಜನಿಕಾಂತ್, ಮಾಧ್ಯಮಗಳ ಜೊತೆ ಮಾತನಾಡಿ ಯೋಗಿಗಳು, ತಪಸ್ವಿಗಳು, ಮಹಾತ್ಮರು ನನಗಿಂತ ಎಷ್ಟೇ ಚಿಕ್ಕವರಾಗಿದ್ದರೂ, ಅವರ ಕಾಲು ಹಿಡಿದುಕೊಂಡು ಆಶೀರ್ವಾದ ಪಡೆಯುವುದು ನನ್ನ ಅಭ್ಯಾಸ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ರಜನಿ ಹೇಳಿದ್ದಾರೆ. ಈ ಮೂಲಕ ವಿವಾದಕ್ಕೆತೆರೆ ಎಳೆಯುವ ಪ್ರಯತ್ನ ಮಾಡಿದ್ದರು.

ಜೈಲರ್ ಸಿನಿಮಾ ಯಶಸ್ಸಿನ ಬೆನ್ನಲ್ಲೇ ರಜನಿಕಾಂತ್ ಟೆಂಪಲ್ ರನ್ ಮಾಡುತ್ತಿದ್ದರು. ಸಿನಿಮಾ ರಿಲೀಸ್ ವೇಳೆ ಅವರು ಹಿಮಾಲಯಕ್ಕೆ ಹಾರಿದ್ದರು. ಅಲ್ಲಿ ಧ್ಯಾನಕ್ಕೆ ಶರಣಾಗಿದ್ದರು. ಅಲ್ಲಿಂದ ಹೊರಟು ಇದೀಗ ಉತ್ತರ ಪ್ರದೇಶದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಅಯೋಧ್ಯಗೆ ತೆರಳಿ ಶ್ರೀರಾಮನ ದರ್ಶನ ಪಡೆದಿದ್ದಾರೆ. ನಿರ್ಮಾಣ ಹಂತದಲ್ಲಿರುವ ದೇವಸ್ಥಾನವನ್ನೂ ಅವರು ವೀಕ್ಷಣೆ ಮಾಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!