ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾಗಾಗಿ ಸಿನಿಪ್ರಿಯರು ಒಂದುವರೆ ವರ್ಷಗಳಿಂದ ಕಾದು ಕುಳಿತಿದ್ದಾರೆ. ಈ ನಡುವೆ ರಾಕಿ ಬಾಯ್ ಸಿನಿಮಾ ಬಗ್ಗೆ ಆಗಾಗ ಗಾಳಿಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಒಂದು ಸುದ್ದಿ ಗಾಂಧಿ ನಗರದ ಗಲ್ಲಿಗಳಲ್ಲಿ ಹರಿದಾಡುತ್ತಿದೆ.
ಯಶ್ ಅವರ ಮುಂದಿನ ಸಿನಿಮಾದಲ್ಲಿ ನಟಿ ಸಾಯಿಪಲ್ಲವಿ ನಾಯಕಿಯಾಗಿ ಆಯ್ಕೆಯಾಗಿದ್ದು, ಈ ಮೂಲಕ ಚಂದನವನಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಮೊನ್ನೆಯಷ್ಟೇ ರಾಕಿ ಬಾಯ್ ತಮ್ಮ ಇನ್ಸ್ಟಾಗ್ರಾಮ್ ಪ್ರೋಫೈಲ್ ಫೋಟೋ ಬದಲಿಸಿದ್ದರು. ಇದರಿಂದ ಅಭಿಮಾನಿಗಳಲ್ಲಿ ಯಶ್ ತಮ್ಮ ಮುಂದಿನ ಚಿತ್ರದ ಅಪ್ಡೇಟ್ ನೀಡಿದ್ದಾರಾ ? ಎಂಬ ಕುತೂಹಲ ಮೂಡಿತ್ತು. ನಂತರ ಯಶ್ ಅವರು ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದು, ಡಿಸೆಂಬರ್ 8 ಕ್ಕೆ ತಮ್ಮ ಮುಂದಿನ ಸಿನಿಮಾದ ಟೈಟಲ್ ಅನೌನ್ಸ್ ಮಾಡುವುದಾಗಿ ತಿಳಿಸಿದ್ದರು. ಇದರಿಂದ ಸಿನಿ ರಸಿಕರು ಫುಲ್ ಖುಷ್ ಆಗಿದ್ದರು.
ಯಶ್ ಅವರು ಅಪ್ಲೋಡ್ ಮಾಡಿದ್ದ ಇಸ್ಟಾಗ್ರಾಮ್ ಪ್ರೊಫೈಲ್ ಫೋಟೋದಿಂದ ಯಶ್ 19 ಬಗ್ಗೆ ಮತ್ತೆ ಚರ್ಚೆ ಶುರುವಾಗಿತ್ತು. ಲೋಡಿಂಗ್ ಎಂಬ ಬರಹವಿರುವ ಫೋಟೊವನ್ನು ಯಶ್ ಅವರು ಅಪ್‌ಲೋಡ್ ಮಾಡಿದ್ದರು. ಈ ಫೋಟೊ ಮೂಲಕ ಯಶ್ ತಮ್ಮ ಮುಂದಿನ ಸಿನಿಮಾ ಅಪ್ಡೇಟ್ ನೀಡಿದ್ದಾರಾ ಎಂಬ ಕುತೂಹಲ ಮೂಡಿತ್ತು.
ಯಶ್ ಅವರ ಮುಂದಿನ ಸಿನಿಮಾದ ಟೈಟಲ್ ಅನೌನ್ಸ್‌ಮೆಂಟ್ ಗಾಗಿ ಅಭಿಮಾನಿಗಳು ಬಹಳಾ ಉತ್ಸಾಹದಿಂದ ಎದುರುನೋಡುತ್ತಿದ್ದಾರೆ. ಈ ನಡುವೆ ಸಾಯಿ ಪಲ್ಲವಿ ಅವರು ಯಶ್ ಅವರ ಮುಂದಿನ ಚಿತ್ರಕ್ಕೆ ನಾಯಕಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಚಿತ್ರ ತಂಡದಿಂದ ಅಧಿಕೃತ ಮಾಹಿತಿ ಹೊರಬರಬೇಕಿದೆ.