Mysore
19
mist

Social Media

ಶನಿವಾರ, 20 ಡಿಸೆಂಬರ್ 2025
Light
Dark

ಬರ್ಕಯ್ಯ ಪೇಪರ್‌ ಮುಂದಾಗಡೆ ಬರ್ಕೋ ಕಬಡ್ಡಿ ನಮ್ದು ಎಂದ ಕಿಚ್ಚ

ವರ್ಲ್ಡ್‌ ಕಪ್‌ ಬಳಿಕ ಕ್ರೀಡಾಭಿಮಾನಿಗಳು ಪ್ರೋ ಕಬಡ್ಡಿ ಲೀಗ್‌ ಗಾಗಿ ಕಾಯುತ್ತಿದ್ದಾರೆ. ಮುಂದಿನ ತಿಂಗಳು, ಅಂದ್ರೆ ಡಿಸೆಂಬರ್‌ 2ಕ್ಕೆ ಪ್ರೋ ಕಬಡ್ಡಿ ಲೀಗ್‌ ಶುರುವಾಗಲಿದೆ.

ಈ ನಡುವೆ ಬೆಂಗಳೂರು ಬುಲ್ಸ್ ತಂಡದ ರಾಯಭಾರಿಯಾಗಿರುವ ಸ್ಯಾಂಡಲ್ವುಡ್‌ ಬಾದ್‌ ಶಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಸಾಮಾಜಿಕ ಜಾಲತಾಣದಲ್ಲಿ ಪ್ರೋ ಕಬಡ್ಡಿ ಲೀಗ್‌ ನ ಜಾಹಿರಾತಿನ ವಿಡಿಯೋ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಕಿಚ್ಚ ಸುದೀಪ್‌ ಹೊಳೆಯುತ್ತಿರುವ ಬೆಳಗಿನ ಸೂರ್ಯ ರಶ್ಮಿಯ ಬೇಳಕಲ್ಲಿ ಬೆಳ್ಳನೆ ಕುದುರೆಯೇರಿ ರೋಶಾವೇಶದಿಂದ ಬರುತ್ತಾರೆ.

ಈ ಜಾಹಿರಾತನ್ನು ಯಾವುದೇ ಸಿನಿಮಾಗೂ ಕಮ್ಮಿ ಇಲ್ಲದಂತೆ ಶೂಟ್‌ ಮಾಡಲಾಗಿದೆ. ಈ ವಿಡಿಯೋದ ಆರಂಭದಲ್ಲಿ ಕಿಚ್ಚ ಯಾವುದೋ ಯುದ್ಧಕ್ಕೆ ಹೋಗುತ್ತಿರುವ ಖದರ್‌ ನಲ್ಲಿ ಬಿಳಿ ಬಣ್ಣದ ಕುದುರೆಯೇರಿ ರಾಜನಂತೆ ಬರುತ್ತಾರೆ. ನಟ ಬಾಲಯ್ಯ ಕೂಡ ಎದುರಿನಿಂದ ಮತ್ತೊಂದು ಕುದುರೆಯೇರಿ ಬರುತ್ತಾರೆ. ಇವರಿಬ್ಬರೂ ಮುಖಾಮುಖಿಯಾಗಿ ಜಗಜ್ಜೆಟ್ಟಿಗಳಂತೆ ಕಾದಾಡುವಾಗ ಕಬಡ್ಡಿ ನಮ್ದು ಎನ್ನುವ ಸಾಲು ಬರುತ್ತದೆ.

ಇನ್ನು ಈ ವಿಡಿಯೋವನ್ನು ಹಂಚಿಕೊಂಡಿರುವ ಬೆಂಗಳೂರು ಬುಲ್ಸ್‌ ತಂಡದ ರಾಯಭಾರಿ ಕಿಚ್ಚ ಸುದೀಪ್‌, ಬರ್ಕಯ್ಯ. ಪೇಪರ್‌ ಮುಂದಾಗಡೆ ಬರ್ಕೋ. ಕಬಡ್ಡಿ ನಮ್ದು. ನೋಡಿರಿ ಪ್ರೋ ಕಬಡ್ಡಿ ಲೀಗ್‌ ಡಿಸೆಂಬರ್‌ 2 ರಾತ್ರಿ 8 ರಿಂದ ನಿಮ್ಮ ಸ್ಟಾರ್‌ ಸ್ಪೋರ್ಟ್ಸ್‌ ಮತ್ತು ಡಿಸ್ನಿ ಪ್ಲಸ್‌ ಹಾಟ್ ಸ್ಟಾರ್‌ ನಲ್ಲಿ ಎಂದು ಬರೆದುಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!