Mysore
14
overcast clouds

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಮಲೇಷ್ಯಾದಲ್ಲೂ ದಾಖಲೆ ಬರೆದ ಜೈಲರ್

ರಜನಿಕಾಂತ್ ಮತ್ತು ಶಿವರಾಜ್ ಕುಮಾರ್ ಕಾಂಬಿನೇಷನ್ ನ ಜೈಲರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭಾರೀ ಸದ್ದು ಮಾಡಿತ್ತು. ಆರು ನೂರ ಕೋಟಿಗೂ ಹೆಚ್ಚು ಹಣವನ್ನು ಅದು ಬಾಕ್ಸ್ ಆಫೀಸಿನಿಂದ ಬಾಚಿಕೊಂಡಿತ್ತು. ಹಲವಾರು ದಾಖಲೆಗಳನ್ನು ಕೂಡ ಚಿತ್ರ ನಿರ್ಮಾಣ ಮಾಡಿತ್ತು. ಇದೀಗ ಮಲೇಷ್ಯಾದಲ್ಲಿ ಸಿನಿಮಾ ದಾಖಲೆಯೊಂದನ್ನು ಬರೆದಿದೆ.

ಜೈಲರ್ ಸಿನಿಮಾ ಮಲೇಷ್ಯಾದಲ್ಲಿ ರಿಲೀಸ್ ಆಗಿದ್ದು, ಈವರೆಗೂ ರಿಲೀಸ್ ಆದ ಭಾರತೀಯ ಚಿತ್ರಗಳಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಚಿತ್ರಗಳಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ. ಅತ್ಯಧಿಕ ಗಳಿಕೆ ಮಾಡಿದ ಭಾರತೀಯ ಸಿನಿಮಾ ಎನ್ನುವ ಹೆಗ್ಗಳಿಕೆಯೂ ಅದು ಪಾತ್ರವಾಗಿದೆ.

ಜೈಲರ್ ಸಿನಿಮಾ ಭರ್ಜರಿ ಗೆಲುವು ಸಾಧಿಸಿದೆ. ಬಾಕ್ಸ್ ಆಫೀಸಿನಲ್ಲಿ ಭಾರೀ ಕಲೆಕ್ಷನ್ ಮಾಡಿದೆ. ಹೀಗಾಗಿ ನಿರ್ಮಾಪಕ ಕಲಾನಿಧಿ ಮಾರನ್, ಭರ್ಜರಿ ಉಡುಗೊರೆಗಳನ್ನು ಚಿತ್ರತಂಡಕ್ಕೆ ನೀಡುತ್ತಿದ್ದಾರೆ. ಚಿತ್ರದ ನಾಯಕ, ನಿರ್ದೇಶಕ, ಸಂಗೀತ ನಿರ್ದೇಶಕರಿಗೆ ಈಗಾಗಲೇ ಕಾರುಗಳ ಉಡುಗೊರೆ ನೀಡಿರುವ ನಿರ್ಮಾಪಕರು, ಇದೀಗ ಚಿತ್ರತಂಡದಲ್ಲಿ ಕೆಲಸ ಮಾಡಿದ ಮುನ್ನೂರಕ್ಕೂ ಹೆಚ್ಚು ಜನರಿಗೆ ಬಂಗಾರದ ಉಡುಗೊರೆ ನೀಡಿದೆ. ಸಕ್ಸಸ್ ಪಾರ್ಟಿಯಲ್ಲಿ ಚಿನ್ನವನ್ನು ಗಿಫ್ಟ್ ಆಗಿ ನೀಡಿದ್ದಾರೆ.

ಈ ಹಿಂದೆ ನಿರ್ಮಾಪಕ ಕಲಾನಿಧಿ ಮಾರನ್, ನಟ ರಜನಿಕಾಂತ್ ಅವರಿಗೆ ದುಬಾರಿ ಉಡುಗೊರೆಯನ್ನೇ ನೀಡಿದ್ದರು. ಈ ಸಿನಿಮಾಗಾಗಿ ರಜನಿ 250 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದ್ದು, ಮೊದಲ ಕಂತಾಗಿ 150 ಕೋಟಿ ರೂಪಾಯಿ ಸಂದಾಯವಾಗಿತ್ತು. ಎರಡನೇ ಕಂತು ನೂರು ಕೋಟಿ ರೂಪಾಯಿ ಮತ್ತು ಬಿಎಂಡಬ್ಲೂ ಎಕ್ಸ್ 7 ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ. ಈ ಕಾರಿನ ಬೆಲೆ 1.50 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.

ಜೈಲರ್ ಸಿನಿಮಾ ಈಗಲೂ ಬಾಕ್ಸ್ ಆಫೀಸಿನಲ್ಲಿ ಸದ್ದು ಮಾಡುತ್ತಿದೆ. ಹಲವು ವರ್ಷಗಳ ನಂತರ ರಜನಿ ಇಂಥದ್ದೊಂದು ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗಾಗಿ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಸಂಭ್ರಮ ತಂದಿದೆ. ಈ ಖುಷಿಯನ್ನು ಅವರು ಚಿತ್ರತಂಡದ ಜೊತೆಗೆ ಹಂಚಿಕೊಂಡಿದ್ದರು.

ಜೈಲರ್ ಸಿನಿಮಾದ ಚಿತ್ರತಂಡದ ಜೊತೆಗೆ ಕೇಕ್ ಕತ್ತರಿಸಿ ಸಂಭ್ರಮಸಿರುವ ರಜನಿಕಾಂತ್, ಸಿನಿಮಾಗಾಗಿ ದುಡಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದರು. ಅಲ್ಲದೇ ಸಿನಿಮಾ ನೋಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಈ ಸಂದರ್ಭದಲ್ಲಿ ಅವರು ಹೇಳಿದ್ದರು. ಸ್ವತಃ ತಾವೇ ಎಲ್ಲರಿಗೂ ಕೇಕ್ ತಿನ್ನಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!