Mysore
16
clear sky

Social Media

ಬುಧವಾರ, 04 ಫೆಬ್ರವರಿ 2026
Light
Dark

ಅಲ್ಲು ಅಭಿಮಾನಿಗಳಿಗೆ ಸಿಹಿ ಸುದ್ದಿ : ಪುಷ್ಪ-೨ ಟೀಸರ್‌ ಬಿಡುಗಡೆ ಡೇಟ್‌ ಫಿಕ್ಸ್‌ !

ಬೆಗಳೂರು: ದಕ್ಷಿಣ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ಪುಷ್ಪ 2 ಸಿನಿಮಾದ ಹೊಸ ಅಪ್‌ಡೇಟ್‌ ಹೊರಬಿದ್ದಿದೆ. ಏಪ್ರಿಲ್‌ 8ರಂದು ಪುಷ್ಪಾ 2 ಟೀಸರ್‌ ರಿಲೀಸ್‌ ಮಾಡುವುದಾಗಿ ಚಿತ್ರತಂಡ ಪ್ರಕಟಿಸಿದೆ. ಅಲ್ಲು ಅರ್ಜುನ್‌ ಹುಟ್ಟುಹಬ್ಬದಂದೇ ಟೀಸರ್‌ ಬಿಡುಗಡೆಯಾಗಲಿದೆ.

ಈ ಕುರಿತಾದ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ. ಪುಷ್ಪಾ 2 ಸಿನಿಮಾವು ಆಗಸ್ಟ್‌ 15, 2024ರಂದು ಬಿಡುಗಡೆಯಾಗಲಿದೆ. ರಶ್ಮಿಕಾ ಮಂದಣ್ಣ ಅವರು ನಾಯಕಿಯಾಗಿ ನಟಿಸುವ ಈ ಸಿನಿಮಾಕ್ಕೆ ಸುಕುಮಾರ್‌ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ.

“ಪುಷ್ಪ ಸಾಮೂಹಿಕ ಜಾತ್ರೆ ಶುರು ಮಾಡೋಣ. ಬಹು ನಿರೀಕ್ಷಿತ ಪುಷ್ಪ 2 ದಿ ರೂಲ್ ಟೀಸರ್ ಏಪ್ರಿಲ್ 8 ರಂದು ಬಿಡುಗಡೆಯಾಗಲಿದೆ. ಬೆಂಕಿಯನ್ನು ದ್ವಿಗುಣಗೊಳಿಸಲು ಬರುತ್ತಿದ್ದಾರೆ” ಎಂದು ಮೈತ್ರಿ ಮೂವೀ ಮೇಕರ್ಸ್ ಟ್ವೀಟ್ ಮಾಡಿದೆ. ಆಗಸ್ಟ್ 15 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಇದೇ ಸಮಯದಲ್ಲಿ ಚಿತ್ರತಂಡ ಸ್ಪಷ್ಟಪಡಿಸಿದೆ.

ಏಪ್ರಿಲ್ 8 ರಂದು ಪುಷ್ಪ 2 ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಬಹಿರಂಗಪಡಿಸಿದೆ. ಏಪ್ರಿಲ್ 8 ರಂದು ಅಲ್ಲು ಅರ್ಜುನ್ ಹುಟ್ಟುಹಬ್ಬದ ದಿನದಂದೇ ಟೀಸರ್ ಬಿಡುಗಡೆಯಾಗುವುದು ಅಲ್ಲು ಅಭಿಮಾನಿಗಳಿಗೆ ಡಬಲ್‌ ಖುಷಿ ತಂದಿದೆ. ಚಿತ್ರತಂಡವು ಪುಷ್ಪಾ 2 ಟೀಸರ್ ದಿನಾಂಕದ ಪೋಸ್ಟರ್ ಅನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಈ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್‌ ಅವರ ಕಾಲು ಮಾತ್ರ ಕಾಣಿಸುತ್ತದೆ. ಹಿಂಬದಿಯಲ್ಲಿ ದೀಪಗಳು ಉರಿಯುತ್ತಿವೆ. ಪುಷ್ಪ ಮಾಸ ಜಾತ್ರೆ ಆರಂಭವಾಗುತ್ತಿದ್ದಂತೆಯೇ ಈ ಟೀಸರ್ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದೆ

Tags:
error: Content is protected !!