Mysore
22
haze

Social Media

ಗುರುವಾರ, 11 ಡಿಸೆಂಬರ್ 2025
Light
Dark

ರಾಜ್ಯೋತ್ಸವದಲ್ಲಿ ಹೊಸಬರ ದರ್ಬಾರ್

ಬೆಂಗಳೂರು : ಇಂದು ಐದು ಚಿತ್ರಗಳು ತೆರೆಗೆ; ಚಿತ್ರರಂಗಕ್ಕೆ ಹೊಸ ಮುಖಗಳ ಆಗಮನ

ನವೆಂಬರ್ ತಿಂಗಳಿನಲ್ಲಿಯೇ ಚಿತ್ರಗಳನ್ನು ಬಿಡುಗಡೆ ಮಾಡಬೇಕು ಎಂದು ಕೆಲವಾರು ಮಂದಿ ಕಾಯುತ್ತಿರುತ್ತಾರೆ. ಇಡೀ ತಿಂಗಳು ನಡೆಯುವ ಕನ್ನಡ ಜಾತ್ರೆಯ ಮೆರಗು ಹೆಚ್ಚಿಸುವಲ್ಲಿ ನಮ್ಮ ಚಿತ್ರದ ಪಾತ್ರವೂ ಇರಲಿ ಎನ್ನುವುದು ಅವರ ಉದ್ದೇಶ. ಅದಕ್ಕೆ ತಕ್ಕುದಾಗಿ ಈ ವಾರ ಐದು ಚಿತ್ರಗಳು ತೆರೆ ಕಾಣುತ್ತಿದ್ದು, ಎಲ್ಲವೂ ಹೊಸಬರ ಚಿತ್ರಗಳು ಎನ್ನುವುದು ವಿಶೇಷ. ಅಲ್ಲಿಗೆ ಕನ್ನಡ ರಾಜ್ಯೋತ್ಸವದ ಆರಂಭದಲ್ಲಿಯೇ ಹೊಸ ಪ್ರತಿಭೆಗಳ ದರ್ಬಾರ್ ಶುರುವಾಗಿದೆ.

ಬನಾರಸ್‌ನಲ್ಲಿ ಝೈದ್ ಖಾನ್

ನ್ಯಾಶನಲ್ ಖಾನ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ತ್ರಿಲೋಕ್ ರಾಜ ಬಲ್ಲಾಳ ನಿರ್ಮಿಸಿರುವ ಚಿತ್ರ ‘ಬನಾರಸ್ ಜಯತೀರ್ಥ ರಚನೆ, ನಿರ್ದೇಶನ ಚಿತ್ರಕ್ಕಿದ್ದು, ಝೈದ್‌ಖಾನ್ ಮೊದಲ ಬಾರಿಗೆ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾಶಿಯಲ್ಲಿ ನಡೆಯುವ ಪ್ರೇಮಕಥೆಯ ತಿರುಳನ್ನು ಹೊಂದಿರುವ ಚಿತ್ರದಲ್ಲಿ ಸೋನಾಲ್ ಮೊಂತೆರೊ ನಾಯಕಿ. ಸುಜಯ ಶಾಸ್ತ್ರಿ, ದೇವರಾಜ್, ಅಚ್ಯುತ ಕುಮಾರ್, ಸಪ್ನಾರಾಜ್, ಬರ್ಕತ್ ಅಲಿ ಮೊದಲಾದ ತಾರಾ ಬಳಗವಿದೆ. ಅಜನೀಶ್ ಲೀಕನಾಥ್ ಸಂಗೀತ ಸಂಯೋಜನೆ ಅದ್ವೈತ ಗುರುಮೂರ್ತಿ ಛಾಾಂಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ಎ.ವಿಜಯ್, ಡಿಫರೆಂಟ್ ಡ್ಯಾನಿ ಸಾಹಸ ಸಂಯೋಜನೆ , ರಘು ನಿಡುವಳ್ಳಿ ಸಂಭಾಷಣೆ, ನಾಗೇಂದ್ರ ಪ್ರಸಾದ್ ಗೀತ ರಚನೆ ಚಿತ್ರಕ್ಕಿದೆ.

ನೈಜ ಘಟನೆ ಆಧಾರಿತ ಚಿತ್ರ ಕಂಬ್ಲಿಹುಳ

ಗ್ರೇ ಸ್ಕ್ವೈರ್ ಸ್ಟುಡಿಯೋಸ್‌ ಸಂಸ್ಥೆಯ  ಮೂಲಕ ವಿಜಯ್‌  ಸವೀನ್, ಪುನೀತ್ ಹಾಗೂ ಗುರು ನಿರ್ಮಿಸಿರುವ ಮಲೆನಾಡಿನ ಹಿನ್ನೆಲೆಯ, ನೈಜ ಘಟನೆ ಆಧಾರಿತ ಚಿತ್ರ ಕಂಬ್ಲಿಹುಳ. ಈ ಹಿಂದೆ ಕಿರುಚಿತ್ರಗಳ ನಿರ್ದೇಶನ ಮಾಡಿರುವ ನವನ್ ಶ್ರೀನಿವಾಸ್ ನಿರ್ದೇಶನದ ಮೊದಲ ಚಿತ್ರ ಇದು.

ಹೊಸಬರಾದ ಅಂಜನ್ ನಾಗೇಂದ್ರ ಹಾಗೂ ಅಶ್ವಿತಾ ಆರ್. ಹೆಗ್ಡೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ರೋಹಿತ್ ಕುಮಾರ್, ದೀಪಕ್ ರೈ ಪಾಣಾಜೆ, ಸಂಧ್ಯಾ ಅರಕೆರೆ, ಸಂಪತ್ ಶೆಟ್ಟಿ ಸೇರಿ ಹಲವು ಯುವ ಪ್ರತಿಭೆಗಳು ಚಿತ್ರದಲ್ಲಿದ್ದಾರೆ. ಸತೀಶ್ ರಾಜೇಂದ್ರನ್ ಛಾಯಗ್ರಹಣ, ಜಿತೇಂದ್ರ ನಾಯಕ ಮತ್ತು ರಾಘವೇಂದ್ರ ಟಿ.ಕೆ. ಸಂಕಲನ, ಶಿವ ಪ್ರಸಾದ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.

ರಾಜ ಬಾಲಕೃಷ್ಣ ನಿರ್ದೇಶನದಲ್ಲಿ ಸೆಪ್ಟೆಂಬರ್ 13

 

ನಿಗ್ಲಿ ಅಡ್ವರ್ಟೈಸಿಂಗ್ ಸಂಸ್ಥೆಯ  ಮೂಲಕ ಐವನ್ ನಿಗ್ಲಿ ನಿರ್ಮಿಸಿರುವ ಚಿತ್ರ ಸೆಪ್ಟೆಂಬರ್ 13.  ತಾವು ನೋಡಿದ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಲಾಗಿದ್ದು, ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವ ಚಿತ್ರ ಇದು ಎಂದು ನಿರ್ದೇಶಕ ರಾಜ ಬಾಲಕೃಷ್ಣ ಚಿತ್ರದ ಬಗ್ಗೆ ಹೇಳಿಕೊಂಡಿದ್ದಾರೆ. ಹೊಸಬರಿಗೆ ಹೆಚ್ಚಿನ ಅವಕಾಶ ಚಿತ್ರದಲ್ಲಿ ಇದ್ದು, ಶ್ರೇಯಾ, ಜೈಜಗದೀಶ್, ವಿನಯ  ಪ್ರಸಾದ್, ಯಮುನಾ ಶ್ರೀನಿಧಿ, ಚಿಂತ್ ರಾಜ್, ಸತ್ಯರಾಮರಾವ್ ಮುಂತಾದವರು ಚಿತ್ರತಂಡದ ಭಾಗವಾಗಿದ್ದಾರೆ.

 

 

ಬೆಂಗಳೂರಿನಿಂದ ಮೈಸೂರಿಗೆ ‘ಘೋಸ್ಟ್’
ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ಎನ್. ನಿರ್ಮಿಸುತ್ತಿರುವ ಚಿತ್ರ ಘೋಸ್ಟ್. ಇತ್ತೀಚೆಗೆ ಓಲ್ಡ್ ವಾಂಕ್ ಚಿತ್ರವನ್ನು ನೀಡಿದ ಶ್ರೀನಿ ನಿರ್ದೇಶನದ ಈ ಚಿತ್ರದ ಮುಖ್ಯಪಾತ್ರಧಾರಿ ಶಿವರಾಜಕುವಾರ್. ಚಿತ್ರೀಕರಣ ಬೆಂಗಳೂರಿನಲ್ಲಿ ಮಿನರ್ವ ಮಿಲ್‌ನಲ್ಲಿ ಭರದಿಂದ ಸಾಗಿದೆ ಎನ್ನುತ್ತಾರೆ ನಿರ್ಮಾಪಕರು. ಮಲಯಾಳದ ಜನಪ್ರಿಯ ನಟ ಜಯರಾಮ್ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸುತ್ತಿದ್ದು, ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಮುಂದಿನ ತಿಂಗಳು ಮೈಸೂರಿನಲ್ಲಿ ಘೋಸ್ಟ್ ಚಿತ್ರೀಕರಣ ನಡೆಯಲಿದೆ.

 

ಆರ್.ಕೆ. ನಿರ್ದೇಶನದಲ್ಲಿ ಸಂಜು ಮತ್ತು ಗೀತಾ
ಸಂಜು ಮತ್ತು ಗೀತಾ ಟೈಟಲ್‌ನ ಹೊಸ ಚಿತ್ರ ಸೆಟ್ಟೇರಿದ್ದು, ಆರ್‌ಕೆ ಚಿತ್ರದ ನಿರ್ದೇಶಕರು. ಚಿತ್ರದಲ್ಲಿ ವಿನಯ್‌ ಕಾರ್ತಿಕ್, ಸನ್ಮಿತ ಜೋಡಿ ಇದ್ದು, ನಾಯಕಿಯ ತಂದೆಯ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್, ಭವ್ಯ ನಾಯಕನ ತಾಯಿಯಾಗಿ ನಟಿಸಲಿದ್ದಾರೆ. ದೊಡ್ಡರಂಗೇಗೌಡ , ಸ್ವಾತಿ ಸೇರಿದಂತೆ ಹಲವು ಮಂದಿ ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ವಿವರವನ್ನು ನಿರ್ದೇಶಕ ಆರ್‌ ಕೆ ನೀಡಿದ್ದಾರೆ. ಈ ಚಿತ್ರವನ್ನು ಸಂಜಯ್‌  ನಿರ್ಮಿಸುತ್ತಿದ್ದು, ಕೌಶಿಕ್ ಸಂಗೀತ ಸಂಯೋಜನೆ ನಾಗರಾಜ್ ಛಾಯಾಗ್ರಹಣ, ಶಿವರಾಜು ಮೇಹು ಸಂಕಲನ ಇದೆ.

ನಹಿ ಜ್ಞಾನೇನ ಸದೃಶಂ

ಫ್ರೆಂಡ್ಸ್ ಫಂಡಡ್ ಫಿಲಿಂಸ್ ಲಾಂಛನದಲ್ಲಿ  ಗೆಳೆಯರು ಸೇರಿ ನಿರ್ಮಿಸಿರುವ ಚಿತ್ರ ನಹಿ ಜ್ಞಾನೇನ ಸದೃಶಂ. ಅನಿವಾಸಿ ಕನ್ನಡಿಗ ರಾಮ್ ಕಥೆ ಬರೆದು ನಿರ್ದೇಶಿಸಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ತಾರಾಗಣದಲ್ಲಿ ಬಾಲ ಕಲಾವಿದರಾದ ವೇದಿಕಾ, ಅಭಪಾಲಿ, ಮಹೇಶ್ ಎಸ್.ಪಿ., ಬೆಟ್ಟೇಶ್, ಶರತ್, ಗಗನ, ಶ್ರೀನಿಧಿ, ಲಿಂಗೇಶ್, ಜೊತೆಗೆ ಅರುಣಾ ಬಾಲರಾಜ್, ಎಸ್.ಪಿ.ಮಹೇಶ್ ರಾಘವೇಂದ್ರ ನಾಯಕ್, ವಾಸುದೇವಮೂರ್ತಿ ಇದ್ದಾರೆ. ಪ್ರಮೋದ್ ಮರವಂತೆ ಗೀತ ರಚನೆ, ಅರ್ಜುನ್ ರಾಮು ಸಂಗೀತ ಸಂಯೋಜನೆ, ಶಿವಕುಮಾರ್ ಸಂಕಲನ, ಸುದರ್ಶನ್-ರಾಮ್ ಸಾಹಸ ಇದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!