Mysore
16
clear sky

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ನಿವೇಶನ ನೀಡುವುದಾಗಿ ನಂಬಿಸಿ ವಂಚನೆ: ದೂರು ನೀಡಿದ ಮಾಸ್ಟರ್ ಆನಂದ್!

ಬೆಂಗಳೂರು: ಚಿತ್ರನಟ ಮಾಸ್ಟರ್ ಆನಂದ್ ವಂಚನೆ ಒಳಗಾಗಿದ್ದಾರೆ! ಹೌದು ಈ ಕುರಿತಾಗಿ ಅವರೇ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಿವೇಶನ ಕೊಡಿಸುವುದಾಗಿ 18.50 ಲಕ್ಷ ರೂ. ಅನ್ನು ಮಾಸ್ಟರ್ ಆನಂದ್ ರಿಂದ ಪಡೆದಿದ್ದ ಖಾಸಗಿ ಸಂಸ್ಥೆಯೊಂದು ಇನ್ನೂ ನಿವೇಶನವನ್ನೂ ನೀಡದೇ, ಮುಂಗಡ ಹಣವನ್ನೂ ವಾಪಸ್ ಕೊಡದೇ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.

2020ರ ಸೆಪ್ಟಂಬರ್ ನಿಂದ 2021ರ ಅಕ್ಟೋಬರ್ ಅವಧಿಯಲ್ಲಿ ಈ ವಂಚನೆ ನಡೆದಿದೆ ಎನ್ನಲಾಗಿದೆ. ಇದೀಗ ವಂಚನೆ ಮಾಡಿದೆ ಎನ್ನಲಾಗಿರುವ ಕಂಪನಿ ವಿರುದ್ದ ಚಂದ್ರಲೇಔಟ್ ಠಾಣೆಯಲ್ಲಿ ಮಾಸ್ಟರ್ ಆನಂದ್ ದೂರು ನೀಡಿದ್ದಾರೆ.

ಚಿತ್ರೀಕರಣಕ್ಕೆ ಎಂದು ತೆರಳಿದ್ದ ವೇಳೆ, ಮಾಸ್ಟರ್ ಆನಂದ್ ಕೆಲ ನಿವೇಶನಗಳನ್ನು ವೀಕ್ಷಿಸಿದ್ದರು. ಈ ಸಂದರ್ಭ ಕೊಮ್ಮಘಟ್ಟದ ರಾಮಸಂದ್ರ ಗ್ರಾಮದದಲ್ಲಿ ನಿವೇಶನ ಒಂದನ್ನು ಆನಂದ್ ನೋಡಿದ್ದರು. ಈ ಸಂದರ್ಭ ಖಾಸಗಿ ಕಂಪನಿಯವರು, ನಿವೇಶನ ಖರೀದಿಸಲು ಸಾಲ ಸೌಲಭ್ಯ ಇರೋದಾಗಿ ಹೇಳಿದ್ದು ಆ ಬಳಿಕ ರಾಮಸಂದ್ರದ 2000 ಸಾವಿರ ಅಡಿ ವಿಸ್ತೀರ್ಣದ ನಿವೇಶನ ತೋರಿಸಿದ್ದರು. 70 ಲಕ್ಷಕ್ಕೆ ಖರೀದಿ ಒಪ್ಪಂದವಾಗಿದ್ದು ಹಂತ ಹಂತವಾಗಿ ಮಾಸ್ಟರ್ ಆನಂದ್, 18.5 ಲಕ್ಷ ರೂ. ಮುಂಗಡ ಹಣವನ್ನು ಕಂಪನಿಗೆ ನೀಡಿದ್ದರು ಎನ್ನಲಾಗಿದೆ.

ಮಾಸ್ಟರ್ ಆನಂದ್ ಹಾಗೂ ಅವರ ಪತ್ನಿ ಯಶಸ್ವಿನಿ ಹೆಸರಲ್ಲಿ ಈ ಕಂಪನಿ ಖರೀದಿ ಖರಾರು ಪತ್ರ ಕೂಡ ಮಾಡಿಕೊಟ್ಟಿತ್ತು ಎನ್ನಲಾಗಿದೆ. ಈ ನಡುವೆ ನಿವೇಶನವನ್ನ ಬೇರೆಯವರಿಗೆ ಕಂಪನಿ ಮಾರಾಟ ಮಾಡಿದೆ. ಈ ಬಗ್ಗೆ ವಿಚಾರಿಸಿದಾಗ ಯಾವುದೇ ಸ್ಪಂದನೆ ಸಹ ನೀಡದೆ ಮುಂಗಡ ಹಣವನ್ನೂ ವಾಪಸ್ ಮಾಡಲಿಲ್ಲ ಎನ್ನಲಾಗಿದೆ.

ಹೀಗಾಗಿ, ವಂಚನೆ ಬಗ್ಗೆ ಚಂದ್ರಲೇಔಟ್ ಠಾಣೆಯಲ್ಲಿ ಮಾಸ್ಟರ್ ಆನಂದ್ ದೂರು ನೀಡಿದ್ದಾರೆ. ಬಿಯುಡಿಎಸ್ ಕಾಯ್ದೆ 2019ರ (ಬಿಯುಡಿಎಸ್ ಅನಿಯಂತ್ರಿತ ಉಳಿತಾಯ ಯೋಜನೆಗಳ ನಿಷೇಧ ಕಾಯ್ದೆ) ಅಡಿ ಆರೋಪಿಗಳ ವಿರುದ್ದ ಎಫ್ಐಆರ್ ದಾಖಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!