Mysore
33
scattered clouds

Social Media

ಸೋಮವಾರ, 16 ಮಾರ್ಚ್ 2026
Light
Dark

ಫೆಬ್ರವರಿಯಲ್ಲಿ ರಶ್ಮಿಕಾರೊಂದಿಗೆ ನಿಶ್ಚಿತಾರ್ಥ ವಿಚಾರ: ಕೊನೆಗೂ ಮೌನ ಮುರಿದ ದೇವರಕೊಂಡ

ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಡುವಿನ ನಿಶ್ಚಿತಾರ್ಥ ಇದೇ ಫೆಬ್ರವರಿಯಲ್ಲಿ ನಡೆಯಲಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಇದೀಗ ಈ ಬಗ್ಗೆ ಸ್ವತಃ ನಟ ವಿಜಯ್‌ ದೇವರಕೊಂಡ ಮೌನ ಮುರಿದಿದ್ದಾರೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಿಗೆ ವಾಸವಿದ್ದಾರೆ, ಒಟ್ಟಿಗೆ ಸುತ್ತಾಡುತ್ತಿದ್ದಾರೆ ಎಂಬುದಕ್ಕೆ ಹಲವು ಸಾಕ್ಷಿಗಳು ಸಿಕ್ಕಿವೆ. ಆದರೆ, ಇದನ್ನು ಒಪ್ಪಿಕೊಳ್ಳೋಕೆ ಅವರು ರೆಡಿ ಇಲ್ಲ. ‘ನಾವು ಬೆಸ್ಟ್ ಫ್ರೆಂಡ್ಸ್’ ಎಂದೇ ಹೇಳುತ್ತಾ ಬರುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ಮದುವೆ ಬಗ್ಗೆ ಹಲವಾರು ಊಹಾಪೋಹಗಳು ಹರಿದಾಡುತ್ತಿದ್ದು, ಈ ಬಗ್ಗೆ ನಟ ಮೌನ ಮುರಿದು ಮಾತನಾಡಿದ್ದಾರೆ.

‘ನಾನು ಫೆಬ್ರವರಿಯಲ್ಲಿ ನಿಶ್ಚಿತಾರ್ಥವಾಗಲೀ, ಮದುವೆ ಆಗಲೀ ಆಗುತ್ತಿಲ್ಲ. ಮಾಧ್ಯಮದವರು ಎರಡು ವರ್ಷಕ್ಕೊಮ್ಮೆ ನನಗೆ ಮದುವೆ ಮಾಡಲು ಬಯಸುತ್ತಾರೆ ಅನಿಸುತ್ತಿದೆ. ಪ್ರತಿ ವರ್ಷ ಈ ವದಂತಿ ಕೇಳುತ್ತೇನೆ. ಅವರು ನನಗೆ ಮದುವೆ ಮಾಡಿಸಲು ಕಾಯುತ್ತಿರುತ್ತಾರೆ’ ಎಂದು ಹೇಳುವ ಮೂಲಕ ವಿಜಯ್‌ ದೇವರಕೊಂಡ ಎಲ್ಲಾ ವದಂತಿಗೆ ಬ್ರೇಕ್ ಹಾಕಿದ್ದಾರೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ‘ಗೀತ ಗೋವಿಂದಂ’ ಹಾಗೂ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ದೇವರಕೊಂಡ ನಟಿಸುತ್ತಿರುವ ‘ಫ್ಯಾಮಿಲಿ ಸ್ಟಾರ್’ ಸಿನಿಮಾದಲ್ಲಿ ರಶ್ಮಿಕಾ ವಿಶೇಷ ಸಾಂಗ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!