ಸಿನಿಮಾ ನಿರ್ದೇಶಕ ಕೆ.ಆರ್. ಮುರಳಿ ಕೃಷ್ಣ ಅವರು ಸೋಮವಾರ (ನ.14) ರಾತ್ರಿ 7.30ರ ಸುಮಾರಿಗೆ ಅವರು ನಿಧನರಾಗಿದ್ದಾರೆ. ಕನ್ನಡದ ‘ಗರ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿ, ಕೆಲವು ಸಿನಿಮಾಗಳಿಗೆ ಬಂಡವಾಳ ಹೂಡಿದ್ದ ಅವರು ಅನಾರೋಗ್ಯ ಮತ್ತು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕೆ.ಆರ್. ಮುರಳಿ ಕೃಷ್ಣ ಅವರಿಗೆ ಬ್ರೈನ್ ಟ್ಯೂಮರ್ ಆಗಿತ್ತು. ಅದರ ಸಲುವಾಗಿ ಇತ್ತೀಚೆಗೆ ಶಸ್ತ್ರ ಚಿಕಿತ್ಸೆ ನೆರವೇರಿಸಲಾಗಿತ್ತು. ಆದರೆ ಸರ್ಜರಿ ಬಳಿಕ ಅವರಿಗೆ ಹೃದಯಾಘಾತ ಸಂಭವಿಸಿದ ಪರಿಣಾಮವಾಗಿ ನಿಧನರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಚಿತ್ರರಂಗದ ಅನೇಕರು ಪ್ರಾರ್ಥಿಸಿದ್ದಾರೆ.