Mysore
17
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ನನ್ನ ಕೆಲವು ಪ್ರಶ್ನೆಗಳಿಗೆ ದರ್ಶನ್ ಉತ್ತರ ನೀಡಬೇಕು: ಮೌನ ಮುರಿದ ಧ್ರುವಸರ್ಜಾ

ಬೆಂಗಳೂರು: ಕಾವೇರಿ ಹೋರಾಟದ ಸಂದರ್ಭದಲ್ಲಿ ನಟ ದರ್ಶನ್‌  ಹಾಗೂ ತಮ್ಮ ನಡುವೆ ಎದ್ದು ತೋರಿದ ಮನಸ್ತಾಪದ ವಿಚಾರದಲ್ಲಿ ಧ್ರುವ ಸರ್ಜಾ ತಮ್ಮ ಬರ್ತ್‌ಡೇ ಸಂಭ್ರಮದ ಸಂದರ್ಭದಲ್ಲಿ ಮಾತನಾಡಿದ್ದಾರೆ. ದರ್ಶನ್‌ ಬಳಿ ಕೇಳಬೇಕಾದ ಪ್ರಶ್ನೆಗಳು ನನ್ನ ಬಳಿ ಇದ್ದು, ಅದನ್ನು ಅವರ ಬಳಿಯೇ ಕೇಳಬೇಕಿದೆ ಎಂದಿದ್ದಾರೆ.

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿಮಾನಿಗಳ ನಡುವೆ ಬರ್ತ್‌ಡೇ ಆಚರಿಸಿಕೊಂಡರು. ಅವರ ಮನೆಯ ಮುಂದೆ ಸೇರಿದ ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಧ್ರುವ ಸರ್ಜಾ, ದರ್ಶನ್‌ ಹಾಗೂ ತಮ್ಮ ನಡುವಿನ ಮನಸ್ತಾಪದ ಬಗ್ಗೆ ಮಾತನಾಡಿದರು. ದರ್ಶನ್ ಅವರು ಹಿರಿಯ ನಟ, ಸೀನಿಯರ್ ಕೂಡ. ದರ್ಶನ್ ಅವರ ಉಪಸ್ಥಿತಿ ಮತ್ತು ಅನುಪಸ್ಥಿತಿಯಲ್ಲೂ ಅದೇ ಮರ್ಯಾದೆ ಇರುತ್ತೆ. ಅದರೆ ಅವರ ಬಗ್ಗೆ ಕೇಳಲು ಕೆಲವು ಪ್ರಶ್ನೆಗಳಿವೆ. ಅವುಗಳನ್ನು ಅವರ ಬಳಿಯೇ ಕೇಳಬೇಕು ಎಂದಿದ್ದಾರೆ.

ನನಗೂ ಸ್ವಾಭಿಮಾನ ಇದೆ, ನಾನು ಅವರೊಟ್ಟಿಗೆ ಈ ವಿಚಾರವಾಗಿ ಮಾತನಾಡುತ್ತೇನೆ. ಕೆಲವರು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಇಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಬಗ್ಗೆ ಹೇಳುವುದು ಇಷ್ಟೇ, ನನ್ನಲ್ಲಿರುವ ಕೆಲವು ಗೊಂದಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕು. ನಾಟಕೀಯವಾಗಿ ಮನಸಲ್ಲೊಂದು ಹೊರಗೊಂದು ಥರ ಇರುವುದು ನನಗೆ ಬರುವುದಿಲ್ಲ ಎಂದಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ