Mysore
20
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಗಲ್ಲಾ ಪೆಟ್ಟಿಗೆಯಲ್ಲಿ ದರ್ಶನ್‌ ಕಮಾಲ್‌: 100 ಕೋಟಿ ಕ್ಲಬ್‌ ಸೇರಿದ ಕಾಟೇರ

2023ರ ದಿಸೆಂಬರ್‌ 29ರಂದು ರಿಲೀಸ್‌ ಆದ ನಟ ದರ್ಶನ್‌ ಅಭಿನಯದ ಕಾಟೇರ ಸಿನಿಮಾ ಯಶಸ್ಸು ಕಂಡಿದೆ. ಬಿಡುಗಡೆಗೊಂಡ ಕೇವಲ 7 ದಿನಗಳಲ್ಲಿ 100 ಕೋಟಿ ಕ್ಲಬ್‌ ಸೇರಿದೆ.

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ನಟನೆಯ, ತರುಣ್ ಸುಧೀರ್ ನಿರ್ದೇಶನ ಮತ್ತು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಕಾಟೇರ ಸಿನಿಮಾ 104 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ 2024ರಲ್ಲಿನ ಕನ್ನಡದ ಮೊಲದ ಯಶಸ್ವಿ ಚಿತ್ರವಾಗಿ ಗೆದ್ದು ಬೀಗಿದೆ. ಇದು ದರ್ಶನ್‌ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

ನಟ ದರ್ಶನ್ ಅವರ ಆಪ್ತರು ನೀಡಿದ ಮಾಹಿತಿ ಪ್ರಕಾರ ‘ಕಾಟೇರ’ ಸಿನಿಮಾ ಏಳು ದಿನಕ್ಕೆ 104.58 ಕೋಟಿ ರೂಪಾಯಿ ಗಳಿಸಿದೆ. ಕೇವಲ ಕನ್ನಡದಲ್ಲಿ ರಿಲೀಸ್ ಆಗಿ ‘ಕಾಟೇರ’ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡುತ್ತಿರುವುದು ತಂಡದ ಖುಷಿ ಹೆಚ್ಚಿಸಿದೆ. ಸದ್ಯ ಅಪ್ಪಟ ಕನ್ನಡ ಸಿನಿಮಾ ಕನ್ನಡದ ನೆಲದಲ್ಲಿ ಗೆದ್ದಬೀಗಿದ್ದು, ಟಾಲಿವುಡ್ ಹಾಗೂ ಕಾಲಿವುಡ್​ನಲ್ಲೂ ‘ಕಾಟೇರ’ ಚಿತ್ರ ರಿಲೀಸ್‌ ಬೇಡಿಕೆ ಕಂಡುಬಂದ ಹಿನ್ನಲೆಯಲ್ಲಿ ಇತರೆ ಭಾಷೆಗಳಿಗೆ ಡಬ್‌ ಮಾಡಿ ಸಿನಿಮಾ ರಿಲೀಸ್‌ ಮಾಡುವ ಬಗ್ಗೆ ಚಿತ್ರತಂಡ ಯೋಚಿಸುತ್ತಿದೆ.

ಕಾಟೇರ ಕಲೆಕ್ಷನ್‌ ವಿವರ:

ಡಿಸೆಂಬರ್ 29: 19.79 ಕೋಟಿ ರೂಪಾಯಿ

ಡಿಸೆಂಬರ್ 30: 17.35 ಕೋಟಿ ರೂಪಾಯಿ

ಡಿಸೆಂಬರ್ 31: 20.94 ಕೋಟಿ ರೂಪಾಯಿ

ಜನವರಿ 1: 18.26 ಕೋಟಿ ರೂಪಾಯಿ

ಜನವರಿ 2: 9.24 ಕೋಟಿ ರೂಪಾಯಿ

ಜನವರಿ 3: 9.78 ಕೋಟಿ ರೂಪಾಯಿ

ಜನವರಿ 4: 9.52 ಕೋಟಿ ರೂಪಾಯಿ

ಈವರೆಗೆ ಕಾಟೇರ ಚಿತ್ರದ 52.77 ಲಕ್ಷ ಟಿಕೆಟ್‌ಗಳು ಮಾರಾಟವಾಗಿದೆ. ಹಿರಿಯ ನಟಿ ಮಾಲಾಶ್ರೀ ಮಗಳಾದ ಆರಾಧನಾ ಮೊಟ್ಟ ಮೊದಲ ಬಾರಿಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದಾರೆ. ಅಚ್ಯುತ್‌ ಕುಮಾರ್‌, ಜಗಪತಿ ಬಾಬು, ಕುಮಾರ್‌ ಗೋವಿಂದ್ ಸೇರಿದಂತೆ ದೊಟ್ಟ ತಾರಾ ಬಳಗಳವನ್ನೇ ಚಿತ್ರತಂಡ ಹೊಂದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ