Mysore
26
scattered clouds

Social Media

ಶುಕ್ರವಾರ, 10 ಜನವರಿ 2025
Light
Dark

ಡಾಲಿಯ ಹೊಸ ನಿರ್ಧಾರ: ಸಿನಿ ಒಲವಿನ ಮನಸ್ಸುಗಳಲ್ಲಿ ಮಂದಹಾಸ

ಸ್ಯಾಂಡಲ್ ವುಡ್ ಡಾಲಿ ಖ್ಯಾತಿಯ ಧನಂಜಯ್ ಅವರಿಗೆ ಇಂದು (ಆಗಸ್ಟ್ 23) ಹುಟ್ಟುಹಬ್ಬದ ಸಂಭ್ರಮ. ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಬರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಧನಂಜಯ್ ಫೋಟೋ, ವಿಡಿಯೋ ಶೇರ್ ಮಾಡಿ ಅಭಿಮಾನಿಗಳು ಪ್ರೀತಿಯ ವಿಶ್ ಮಾಡುತ್ತಿದ್ದಾರೆ. ಪ್ರತಿವರ್ಷ ಧನಂಜಯ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಅಭಿಮಾನಿಗಳ ಮಧ್ಯೆ ಆಚರಿಸಿಕೊಳ್ಳುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ ಧನಂಜಯ್ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಆದರೆ ಈ ಬಾರಿ ಕೂಡ ಜನ್ಮದಿನ ಸಂಭ್ರಮಿಸಲ್ಲ ಎಂದು ಹೇಳಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಒಂದು ವರ್ಷ ಸಹ ಆಗಿಲ್ಲ ಹಾಗಾಗಿ ಈ ಬಾರಿಯೂ ಹುಟ್ಟುಹಬ್ಬ ಸಂಭ್ರಮಿಸಲ್ಲ ಎಂದು ಹೇಳಿದ್ದಾರೆ. ಆದರೂ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ವಿಶ್ ಮಾಡುತ್ತಿದ್ದಾರೆ.

ಧನಂಜಯ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಂದ ಒಂದಿಷ್ಟು ಸಾಮಾಜಿಕ ಕೆಲಸಗಳು ಆಗಿವೆ. ರಕ್ತದಾನ, ಅನ್ನ ದಾನ ಕಾರ್ಯಕ್ರಮಗಳು ನಡೆದಿವೆ. ಈ ನಡುವೆ ಧನಂಜಯ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಹುಟ್ಟಹಬ್ಬದ ದಿನ ಡಾಲಿ ಮಾಡಿದ ಘೋಷಣೆ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಅಂದಹಾಗೆ ಧನಂಜಯ್ ಸಿನಿಮಾ ಕುಟುಂಬದಿಂದ ಬಂದ ಸ್ಟಾರ್ ಅಲ್ಲ. ಸಿನಿಮಾದ ಗಂಧಗಾಳಿ ಗೊತ್ತಿಲ್ಲದೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟ. ಚಿತ್ರರಂಗದಲ್ಲಿ ಅವಮಾನ, ಕಷ್ಟ, ಸೋಲು ಎಲ್ಲಾ ಅನುಭಿವಿಸಿ ಇಂದು ಸ್ಟಾರ್ ಆಗಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ನಟನೆ ಜೊತೆಗೆ ನಿರ್ಮಾಣಕ್ಕೂ ಇಳಿದು ಸಕ್ಸಸ್ ಕಂಡಿದ್ದಾರೆ. ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಹುಟ್ಟಿಹಾಕಿರುವ ಧನಂಜಯ್ ಬಡವ ರಾಸ್ಕಲ್ ಸಿನಿಮಾ ನಿರ್ಮಾಣ ಮಾಡಿ ಭರ್ಜರಿ ಯಶಸ್ಸು ಕಂಡರು.

ಚಿತ್ರರಂಗದ ಸಕಸ್ಸ್ ನಟರ ಸಾಲಿಲ್ಲಿ ಇರುವ ಇರುವ ಧನಂಜಯ್ ಇಂದು (ಆಗಸ್ಟ್ 23) ತನ್ನ ಡಾಲಿ ಪಿಕ್ಚರ್ಸ್ ನಿಂದ ವರ್ಷಕ್ಕೆ ಎರಡು ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅದರಲ್ಲೂ ಒಂದು ಸಿನಿಮಾ ಹೊಸಬರಿಗೆ ಅವಕಾಶ ಕೊಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಡಾಲಿ ಪಿಕ್ಚರ್ಸ್ ವರ್ಷಕ್ಕೆ ಎರಡು ಸಿನಿಮಾ ಮಾಡುವ ಬರವಸೆ ನೀಡಿದೆ. ಈ ಬಗ್ಗೆ ಡಾಲಿ ಪಿಕ್ಚರ್ಸ್ ಬಿಡುಗಡೆ ಮಾಡಿದ ಹೇಳಿಕೆ ಹೀಗಿದೆ.

‘ಡಾಲಿ ಪಿಕ್ಚರ್ಸ್ ಎಂಬ ಕನಸೊಂದನ್ನು ಹುಟ್ಟುಹಾಕಿದ ಈ ಸಂಸ್ಥೆಯ ನಿರ್ಮಾತೃ ಧನಂಜಯರವರ ಹುಟ್ಟುಹಬ್ಬದ ಪ್ರಯುಕ್ತ ನಮ್ಮಿಂದ ಹೀಗೊಂದು ಘೋಷಣೆ. ಧನಂಜಯ್ ಯಾವುದೇ ಸಿನಿಮಾ ಹಿನ್ನಲೇ ಇಲ್ಲದೆ ಒಂದ ಹಿಡಿಯಷ್ಟು ಆಸೆ ಮತ್ತು ಬಿಟ್ಟದಷ್ಟು ಪ್ರತಿಭೆ ಕಟ್ಟಿಕೊಂಡು ಗಾಂಧಿನಗರಕ್ಕೆ ಕಾಲಿಟ್ಟವರು. ಒಂದೇ ಒಂದು ಪಾತ್ರ ದಕ್ಕಿಸಿಕೊಳ್ಳಲೂಬಹಳಷ್ಟು ಕಸರತ್ತು ಪಡಬೇಕಾದ ಕಾಲವಿತ್ತು. ಆನೇಕ ತಡೆಗೋಡಿಗಳನ್ನು ಆಡಚಣೆಗಳನ್ನು ದಾಟಿ ಸಾಗಿದ ಅವರ ಪಯಣಕ್ಕೆ ಕರುನಾಡಿಗೆ ತಿಳಿಯದ ಕಥೆಯೇನಲ್ಲ. ಅವರ ಅಷ್ಟೂ ಪ್ರಯತ್ನಗಳ ಸಾರ್ಥಕತೆ ದೊರಕಿದ್ದು ಡಾಲಿ ಪಾತ್ರಕ್ಕೆ ಸಿಕ್ಕದ ಜನಮನ್ನೆ ಹಾಗೂ ನಟರಾಕ್ಷಸ ಎಂಬ ಬಿರುದು.

ಹೀಗಾಗಿ ಹೊಸಬರ ಅರಂಭ ಕಲ್ಲುಮುಳ್ಳಿನ ದಾರಿಯನ್ನು ಹೇಗೆ ಸುಲಭವಾಗಿಸಬಹುದೆಂದುಸ್ವತಃ ಆ ದಾರಿಯಲ್ಲಿ ನಡೆದುಬಂದಿರುವ ಡಾಲಿ ಧನಂಜಯ್ ಅವರ ಆಲೋಚನೆಯೇ ಈ ಘೋಷಣೆಗೆ ಹಿನ್ನಲೆ. ಇನ್ನು ಮುಂದಿ ಪ್ರತಿ ವರ್ಷ ಡಾಲಿ ಪಿಕ್ಚರ್ಸ್ ವತಿಯಿಂದ ಕನಿಷ್ಟ ಎರಡು ಸಿನಿಮಾಗಳನ್ನಾದರೂ ನಿರ್ಮಾಣ ಮಾಡುವುದಾಗಿ ಹಾಗೂ ಇದರಲ್ಲಿ ಮುಖ್ಯವಾಗಿ ಒಂದು ಸಿನಿಮಾವನ್ನು ಕೇವಲ ಹೊಸ ಪ್ರತಿಭೆಗಳಿಗೆ ಮೀಸಲಿಡುವುದಾಗಿ ಈ ಮೂಲಕ ಘೋಷಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಧನಂಜಯ್ ಅವರ ಈ ನಿರ್ಧಾರಕ್ಕೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ನಮ್ಮ ಪ್ರೀತಿ ಸದಾ ಇರುತ್ತೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇನ್ಮುಂದೆ ಡಾಲಿ ಪಿಕ್ಚರ್ಸ್ ನಿಂದ ಮತ್ತೊಂದಿಷ್ಟು ಹೊಸ ಪ್ರತಿಭೆಗಳು ಸ್ಯಾಂಡಲ್ ವುಡ್‌ಗೆ ಎಂಟ್ರಿಕೊಡಲಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ