ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಸ್ಥೆ ಅಥವಾ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ 3 ಯಶಸ್ವಿಯಾಗಿದ್ದು, ಭಾರತ ಹೊಸ ದಾಖಲೆ ಬರೆದಿದೆ. ಚಂದ್ರಯಾನ–3ರ ಯಶಸ್ಸಿನ ಕೀರ್ತಿ ಯಾರಿಗೆ ಸಲ್ಲುತ್ತದೆ. ನಮ್ಮ ವಿಜ್ಞಾನಿಗಳಿಗೋ ಅಥವಾ ‘ಲಾರ್ಡ್’ ತಿರುಪತಿಗೋ? ಎಂದು ನಟ ಚೇತನ್ ಅಹಿಂಸಾ ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿರುವ ಅವರು, ‘ಚಂದ್ರಯಾನ–3 ಯೋಜನೆ ಯಶಸ್ವಿಯಾಗಿದ್ದು, ವಿಕ್ರಮ್ ಲ್ಯಾಂಡಲ್ ಚಂದ್ರನ ಮೇಲೆ ಇಳಿದ ಐತಿಹಾಸಿಕ ಕ್ಷಣವನ್ನು ನೋಡಲು ನನಗೆ ಸಂತೋಷವಾಗಿದೆ ಎಂದಿದ್ದಾರೆ.
ಮುಂದುವರಿದು, ಆದರೆ, ಚಂದ್ರಯಾನ–3ರ ಈ ಯಶಸ್ಸಿನ ಕೀರ್ತಿ ಯಾರಿಗೆ ಸಲ್ಲುತ್ತದೆ: ನಮ್ಮ ವಿಜ್ಞಾನಿಗಳಿಗೋ ಅಥವಾ ‘ಲಾರ್ಡ್‘ ತಿರುಪತಿಗೋ?’ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
Happy to see historic moment of #Chandrayaan3’s landing on the moon—who gets credit: our scientists or ‘Lord’ Tirupathi?
ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಐತಿಹಾಸಿಕ ಕ್ಷಣವನ್ನು ನೋಡಲು ನನಗೆ ಸಂತೋಷವಾಗಿದೆ—ಈ ಯಶಸ್ಸಿನ ಕೀರ್ತಿ/ಗುರುತು ಯಾರಿಗೆ ಸಲ್ಲುತ್ತದೆ: ನಮ್ಮ ವಿಜ್ಞಾನಿಗಳಿಗೆ ಅಥವಾ 'ಲಾರ್ಡ್' ತಿರುಪತಿಗೆ?
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) August 23, 2023
ಮತ್ತೊಂದು ಟ್ವೀಟ್ ಮಾಡಿರುವ ಅವರು, ‘ವಾಸ್ತವ’ ಎಂದು ಬರೆದುಕೊಂಡಿದ್ದು, ಚಂದ್ರಯಾನ-3 ನೌಕೆಯ ಉಡಾವಣೆ ಚಿತ್ರ ಮತ್ತು ವ್ಯಕ್ತಿಯೊಬ್ಬ ಮ್ಯಾನ್‌ಹೋಲ್‌ಗೆ ಇಳಿದಿರುವ ಚಿತ್ರವನ್ನು ಅವರು ಹಂಚಿಕೊಂಡಿದ್ದಾರೆ.
ವಾಸ್ತವ / reality pic.twitter.com/ceni3zviDx
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) August 23, 2023
ಆಗಸ್ಟ್ 23ರ ಬುಧವಾರ ಸಂಜೆ 6.04 ನಿಮಿಷಕ್ಕೆ ಸರಿಯಾಗಿ ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡ್ ರೋವರ್ ಇಳಿದಿದೆ. ಈ ಮೂಲಕ ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿದ ಮೊದಲ ದೇಶವೆಂಬ ಹೆಗ್ಗಳಿಕೆ ಭಾರತದ ಪಾಲಾಗಿದೆ. ಇಸ್ರೋ ಚಂದ್ರಯಾನ-3 ನೌಕೆಯನ್ನು ಜುಲೈ 14ರಂದು ಉಡಾವಣೆ ಮಾಡಿತ್ತು.