Mysore
23
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ರಾಕಿಂಗ್ ಸ್ಟಾರ್ ಮುಂದಿನ ಸಿನಿಮಾ ಟೈಟಲ್ ಅನೌನ್ಸ್ ಗೆ ಕೌಂಟ್ ಡೌನ್

ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ರಾಕಿಂಗ್ ಸ್ಟಾರ್ ಯಶ್ ಮುಂದಿನ ಸಿನಿಮಾ ಟೈಟಲ್ ಅನೌನ್ಸ್ ಗೆ ಕೌಂಟ್ ಡೌನ್ ಶುರುವಾಗಿದೆ.

ಇಂದು ಬೆಳಗ್ಗೆ 9:55 ಕ್ಕೆ ಯಶ್ ಅವರ ಬಹುನಿರೀಕ್ಷಿತ ಸಿನಿಮಾದ ಟೈಟಲ್ ಅನೌನ್ಸ್ ಆಗಲಿದ್ದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಯಶ್ ಅವರ 19ನೇ ಸಿನಿಮಾ ಕೆವಿಎನ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿದೆ ಈ ಸಿನಿಮಾದ ಹೆಸರು ಏನಿರಲಿದೆ ಎಂದು ಸಿನಿ ರಸಿಕರು ಕುತೂಹಲ ಭರಿತರಾಗಿದ್ದಾರೆ.

ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಮ್‌ ಪ್ರೊಫೈಲ್‌ ಫೋಟೋ ಬದಲಿಸಿದ್ದ ಯಶ್‌ ಲೋಡಿಂಗ್‌ ಎಂಬ ಬರಹವಿರುವ ಫೊಟೋವನ್ನು ಅಪ್ಲೋಡ್‌ ಮಾಡಿದ್ದರು. ಇದರಿಂದ ಅಭಿಮಾನಿಗಳಲ್ಲಿ ಯಶ್‌ ತಮ್ಮ ಮುಂದಿನ ಚಿತ್ರದ ಅಪ್ಡೇಟ್‌ ನೀಡಿದ್ದಾರಾ ? ಎಂಬ ಕುತೂಹಲ ಮೂಡಿತ್ತು. ನಂತರ ಸಾಮಾಜಿಕ ಜಾಲತಾಣಗಳಲ್ಲಿ ಕ್ವೆಶ್ಚನ್‌ ಮಾರ್ಕ್‌ ಇರುವ ಫೊಟೋವೊಂದನ್ನು ಹಂಚಿಕೊಂಡು ಡಿಸೆಂಬರ್‌ 8 ಕ್ಕೆ ತಮ್ಮ ಮುಂದಿನ ಸಿನಿಮಾದ ಟೈಟಲ್‌ ಅನೌನ್ಸ್‌ ಮಾಡುವುದಾಗಿ ಯಶ್‌ ಹೇಳಿಕೊಂಡಿದ್ದರು.

ಇದೀಗ ಆ ದಿನ ಬಂದೇ ಬಿಟ್ಟಿದೆ ಎಲ್ಲಾ ಸಿನಿರಸಿಕರ ಚಿತ್ತ ಯಶ್‌ ಮುಂದಿನ ಸನಿಮಾದತ್ತ ನೆಟ್ಟಿದೆ. ಅಭಿಮಾನಿಗಳೆಲ್ಲರೂ ಕೂಡ ಇಂದು ಬೆಳಗ್ಗೆ 9:55 ಕ್ಕೆ ಅನೌನ್ಸ್‌ ಆಗಲಿರುವ ರಾಕಿ ಬಾಯ್‌ ಮುಂದಿನ ಸಿನಿಮಾ ಅಪ್ಡೇಟ್‌ ಗಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ಅಭಿಮಾನಿಗಳ ಈ ಕುತೂಹಲಕ್ಕೆ ಉತ್ತರ ಸಿಗಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ