ಬೆಂಗಳೂರು : ನಟ ಡಾಲಿ ಧನಂಜಯ್ ಅಭಿನಯಿಸಿರುವ ಹೆಡ್ ಬುಷ್ ಸಿನಿಮಾ ಬಿಡುಗಡೆಯಾಗಿ ಪ್ರದರ್ಶನ ಕಾಣುತಿತ್ತು. ಈ ಚಿತ್ರವು ಇದೀಗ ವಿವಾದಕ್ಕೆ ಕಾರಣವಾಗಿದೆ.
ಚಿತ್ರದಲ್ಲಿ ಬೆಂಗಳೂರು ಕರಗದ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಕೆ ಮಾಡಲಾಗಿದೆ. ಅದಲ್ಲದೆ ಸಂಪ್ರದಾಯದ ದೈವಾಚರಣೆಯನ್ನು ಕೂಡ ಬೇಕಾಬಿಟ್ಟಿಯಾಗಿ ತೋರಿಸಲಾಗಿದೆ ಎಂದು ವಹ್ನಿಕುಲ ಕ್ಷತ್ರಿಯ ಹಾಗೂ ತಿಗಳ ಸಮುದಾಯ ಆರೋಪಿಸಿದೆ. ಹೀಗಾಗಿ ಧರ್ಮರಾಯಸ್ವಾಮಿ ದೇವಸ್ಥಾನದ ಸದಸ್ಯರು ಹಾಗೂ ಕರಗ ಸಮಿತಿ ಅಧ್ಯಕ್ಷ ಸತೀಶ್ ಅವರುಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ.
ಈ ದಿನ ದೀಪಾವಳಿ ಹಬ್ಬವಿರುವ ಕಾರಣ ಫಿಲಂ ಚೇಂಬರ್ ಗೆ ರಜೆ ಇದ್ದು. ವಿಜಯನಗರದಲ್ಲಿರುವ ಭಾ ಮಾ ಹರೀಶ್ ನಿವಾಸಕ್ಕೆ ಭೇಟಿ ಮುನಿಡಿ ದೂರನ್ನು ಸಲ್ಲಿಸಲಾಗಿದೆ.