Mysore
21
haze

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಖ್ಯಾತ ನಟ ದಳಪತಿ ವಿಜಯ್ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು

ಚೆನ್ನೈ: ಲಿಯೋ ಚಿತ್ರದಲ್ಲಿನ ನಾ ರೆಡಿ ಹಾಡಿನಲ್ಲಿ ಡ್ರಗ್ಸ್ ಪ್ರಚಾರ ಮಾಡಿದ ಆರೋಪದ ಮೇಲೆ ನಟ ದಳಪತಿ ವಿಜಯ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಚೆನ್ನೈನ ‘ಆರ್‌ಟಿಐ’ ಕಾರ್ಯಕರ್ತ ಸೆಲ್ವಂ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ಈ ಹಾಡು ಮಾದಕ ವ್ಯಸನವನ್ನು ಪ್ರತಿಪಾದಿಸುತ್ತಿರುವುದರಿಂದ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಅರ್ಜಿದಾರರು ಕೋರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ನಟ ವಿಜಯ್ ಅವರ ಲಿಯೋ ಚಿತ್ರದ ಹಾಡು ‘ನಾ ರೆಡಿ’ ಯುವಕರಲ್ಲಿ ಮಾದಕ ವ್ಯಸನವನ್ನು ಉತ್ತೇಜಿಸುತ್ತದೆ ಮತ್ತು ರೌಡಿಸಂಗೆ ಉತ್ತೇಜನ ನೀಡುತ್ತದೆ ಎಂದು ಸೆಲ್ವಂ ಹೇಳಿದ್ದಾರೆ.

ಈ ಹಾಡಿನಲ್ಲಿ ನಟ ವಿಜಯ್ ಸಿಗರೇಟ್ ಹಿಡಿದುಕೊಂಡು ನೃತ್ಯ ಮಾಡುವ ದೃಶ್ಯಗಳಿವೆ. ಹಾಗಾಗಿ ನಟ ವಿಜಯ್ ವಿರುದ್ಧ ಮಾದಕ ದ್ರವ್ಯ ತಡೆ ಕಾಯ್ದೆಯ ಸೆಕ್ಷನ್ ಪ್ರಕಾರ ಕ್ರಮ ಕೈಗೊಳ್ಳಬೇಕು ಮತ್ತು ಇದನ್ನು ಬೆಂಬಲಿಸಿ ಹಾಡು ಬಿಡುಗಡೆ ಮಾಡಿದವರ ವಿರುದ್ಧವೂ ಕಾನೂನು ಪ್ರಕಾರ ಪ್ರಕರಣ ದಾಖಲಿಸಬೇಕು ಎಂದು ಸೆಲ್ವಂ ಆನ್‌ಲೈನ್‌ನಲ್ಲಿ ದೂರು ದಾಖಲಿಸಿದ್ದಾರೆ.

ಡ್ರಗ್ಸ್​​​ನ್ನು ಬೆಂಬಲಿಸುವವರ ವಿರುದ್ಧ ಮತ್ತು ಡ್ರಗ್ಸ್ ತಡೆಗಟ್ಟುವಲ್ಲಿ ಕರ್ತವ್ಯ ಲೋಪವೆಸಗುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಇತ್ತೀಚಿಗಷ್ಟೇ ಹೇಳಿದ್ದರು. ಏತನ್ಮಧ್ಯೆ, ಜೂನ್ 22ರಂದು ಬಿಡುಗಡೆಯಾದ ಈ ಹಾಡು ಕೇವಲ ಮೂರು ದಿನಗಳಲ್ಲಿ 28 ಮಿಲಿಯನ್ ವೀಕ್ಷಣೆ ಕಂಡಿದೆ. ಬಹುನಿರೀಕ್ಷಿತ ಈ ತಮಿಳು ಚಲನಚಿತ್ರವು ಈ ವರ್ಷ ಅಕ್ಟೋಬರ್ 19ರಂದು ತೆರೆಗೆ ಬರಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!