Mysore
15
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

‘ಕ್ಷೇತ್ರಪತಿ’ ವೀಕ್ಷಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ

ಬೆಂಗಳೂರು: ಕ್ಷೇತ್ರಪತಿ ಕಳೆದ ಶುಕ್ರವಾರ ಬಿಡುಗಡೆಯಾದ ಕನ್ನಡದ ಚಲನಚಿತ್ರ. ಉತ್ತರ ಕರ್ನಾಟಕದ ರೈತರ ಕಥೆಯನ್ನು ಹೇಳುವ ಚಿತ್ರ.

ಗುಳ್ಟು ನವೀನ್ ಶಂಕರ್ ಅಭಿನಯದ ಚಿತ್ರ ವಿಮರ್ಶಕರಿಂದ, ಚಿತ್ರ ಪ್ರೇಮಿಗಳಿಂದ ಪ್ರಶಂಸೆಯ ಮಾತುಗಳನ್ನು ಪಡೆದಿದೆ. ಕ್ಷೇತ್ರಪತಿ ಸಿನಿಮಾವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ವೀಕ್ಷಣೆ ಮಾಡಲಿದ್ದಾರೆ. ಸ್ವತಃ ನಾಯಕ ನಟ ನವೀನ್ ಶಂಕರ್ ಮತ್ತು ಚಿತ್ರತಂಡ ಈ ಇಬ್ಬರು ನಾಯಕರನ್ನು ಭೇಟಿ ಮಾಡಿ ಚಿತ್ರದ ತುಣುಕನ್ನು ತೋರಿಸಿದ್ದಾರೆ.

ಕ್ಷೇತ್ರಪತಿ ಸಿನಿಮಾವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಈ ವಾರಾಂತ್ಯದಲ್ಲಿ ವೀಕ್ಷಣೆ ಮಾಡಲಿದ್ದಾರೆ. ನೀವು ಕೊಟ್ಟ ಸಮಯಕ್ಕೆ, ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಎಂದು ನವೀನ್ ಶಂಕರ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಶ್ರೀಕಾಂತ್ ಕಟಗಿ ನಿರ್ದೇಶನದ ಈ ಸಿನಿಮಾದಲ್ಲಿ ರೈತರ ಬದುಕಿನ ಕಥೆ ಇದೆ. ರಾಜಕೀಯ ಡ್ರಾಮಾ ಮತ್ತು ಆಕ್ಷನ್ ಇದೆ. ಕೆಜಿಎಫ್`ನಲ್ಲಿ ಯಶ್ ತಾಯಿಯಾಗಿ ನಟಿಸಿದ್ದ ಅರ್ಚನಾ ಜೋಯಿಸ್, ಇಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ರಾಹುಲ್ ಐನಾಪುರ, ಹರ್ಷ್ ಅರ್ಜುನ್, ಕೃಷ್ಣ ಹೆಬ್ಬಾಳೆ, ಅಚ್ಯುತ್ ಕುಮಾರ್, ಶೈಲಶ್ರೀ ಅರಸ್, ನಾಟ್ಯ ರಂಗ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!