Mysore
28
scattered clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಸಿಎಂ ಆದರೆ ʼನಾನು ಎಂದಿಗೂ ನಟಿಸುವುದಿಲ್ಲʼ: ವೈರಲ್‌ ಆಯ್ತು ದಳಪತಿ ಉತ್ತರ

ಕಾಲಿವುಡ್ ನಟ ವಿಜಯ್ ದಳಪತಿ ಅವರು ಸಾಕಷ್ಟು ಸಮಯದಿಂದ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಈಗ ‘ತಮಿಳಿಗ ವೆಟ್ರಿ ಕಳಗಂ’ (ಟಿವಿಕೆ) ಎಂಬ ಪಕ್ಷ ಸ್ಥಾಪಿಸಿ ವಿಜಯ್ ರಾಜಕೀಯ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಈ ಹಿಂದೆ ಅವರು ನೀಡಿರುವ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ನೀವು ನಿಜ ಜೀವನದಲ್ಲಿ ಮುಖ್ಯಮಂತ್ರಿಯಾದರೆ ಏನಾಗುತ್ತದೆ ಎಂದು ಕೇಳಲಾಗಿತ್ತು. ಈ ಪ್ರಶ್ನೆ ವಿಜಯ್, ಸಿಎಂ ಆದರೆ ʻನಾನು ಎಂದಿಗೂ ನಟಿಸುವುದಿಲ್ಲ’ ಎಂದು ಉತ್ತರಿಸಿದ್ದರು. ರಾಜಕೀಯಕ್ಕೆ ವಿಜಯ್ ಎಂಟ್ರಿ ಕೊಟ್ಟಿರೋ ಬೆನ್ನಲ್ಲೇ ಸಿಎಂ ಸ್ಥಾನದ ಕುರಿತು ನೀಡಿದ್ದ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಸದ್ಯ ‘ತಮಿಳಿಗ ವೆಟ್ರಿ ಕಳಗಂ’ ಪಕ್ಷ ವಿಜಯ್ ಸ್ಥಾಪಿಸಿರುವುದಕ್ಕೆ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಅವರ ಮುಂದಿನ ನಡೆಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

ಕಳೆದ ನವೆಂಬರ್‌ನಲ್ಲಿ ಲೊಕೇಶ್‌ ಕನಕರಾಜ್‌ ನಿರ್ದೇಶನದ ಲಿಯೋ ಸಿನಿಮಾ ಯಶಸ್ಸಿನ ನಂತರ ಹೊಸ ಚಿತ್ರಗಳನ್ನು ದಳಪತಿ ವಿಜಯ್ ಒಪ್ಪಿಕೊಂಡಿದ್ದಾರೆ. ವಿಜಯ್ ಹೊಸ ಪಕ್ಷದ ಕೆಲಸದ ಜೊತೆಗೆ ಸದ್ಯ ಗ್ರೇಟೆಸ್ಟ್‌ ಅಫ್‌ ಆಲ್‌ ಟೈಮ್‌ ಸಿನಿಮಾ ತಂಡದೊಂದಿಗೆ ಕೆಲಸ ಮಾಡುತ್ತಿದ್ದಾರೆ.

https://x.com/actorvijay/status/1753323152216604677?s=20

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ