ಮುಂಬೈ: ಇನ್ಸ್‌ಸ್ಟಾಗ್ರಾಮ್‌ನಿಂದ ತಾತ್ಕಾಲಿಕವಾಗಿ ನಿರ್ಗಮಿಸುತ್ತಿರುವುದಾಗಿ ಬಾಲಿವುಡ್ ನಟಿ ಕಾಜೋಲ್ ಘೋಷಿಸಿದ್ದಾರೆ. “ಸಾಮಾಜಿಕ ಜಾಲತಾಣದಿಂದ ಬ್ರೇಕ್ ಪಡೆಯುತ್ತಿದ್ದೇನೆ.
ಜೀವನದಲ್ಲಿ ಕಠಿಣವಾದ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದೇನೆ’ ಎಂದು ಕಾಜೋಲ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಿಂದ ದೂರ ಸರಿಯುವ ನಿರ್ಧಾರದ ಹಿಂದಿನ ಕಾರಣವನ್ನು ಅವರು ಬಹಿರಂಗಪಡಿಸಿಲ್ಲ. ಈ ಪೋಸ್ಟ್‌ಗೆ ಅನೇಕ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.
“ಜೀವನದಲ್ಲಿ ಕಠಿಣ ಸವಾಲುಗಳನ್ನು ಯಶಸ್ವಿಯಾಗಿ ಜಯಸಿ. ನಿಮಗೆ ಸವಾಲುಗಳನ್ನು ಎದುರಿಸುವ ಛಾತಿ ಇದೆ. ನಿಮಗೆ ಒಳ್ಳೆಯದೇ ಆಗಲಿದೆ. ನಾವೆಲ್ಲರೂ ನಿಮ್ಮನ್ನು ಪ್ರೀತಿಸುತ್ತೇವೆ. ಆದಷ್ಟು ಬೇಗ ಪುನಃ ಇನ್ಸ್‌ಸ್ಟಾಗ್ರಾಮ್‌ಗೆ ಮರಳಿ’ ಎಂದು ಅಭಿಮಾನಿಗಳು ಹಾರೈಸಿದ್ದಾರೆ.