Mysore
22
clear sky

Social Media

ಬುಧವಾರ, 07 ಜನವರಿ 2026
Light
Dark

ಬಾಲಿವುಡ್‌ ನಟ ಶ್ರೇಯಸ್‌ ತಲ್ಪಾಡೆಗೆ ಹೃದಯಾಘಾತ

ಹಿಂದಿ ಹಾಗೂ ಮರಾಠಿ ಭಾಷೆಯ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದ ನಟ ಶ್ರೇಯಸ್‌ ತಲ್ಪಾಡೆ ಹೃದಯಾಘಾತಕ್ಕೊಳಗಾಗಿದ್ದಾರೆ. 47 ವರ್ಷದ ನಟ ಬಹುತಾರಾಗಣದ ʼವೆಲ್‌ಕಮ್‌ ಟು ದ ಜಂಗಲ್‌ʼ ಚಿತ್ರದಲ್ಲಿ ನಟಿಸುತ್ತಿದ್ದು ಚಿತ್ರೀಕರಣ ಮುಗಿಸಿ ಮನೆಗೆ ಮರಳಿದ ನಂತರ ತೀವ್ರ ಆಯಾಸಕ್ಕೆ ಒಳಗಾಗಿದ್ದಾರೆ.

ಪತ್ನಿ ದೀಪ್ತಿ ತಲ್ಪಾಡೆಗೆ ನಟ ಶ್ರೇಯಸ್‌ ತಲ್ಪಾಡೆ ವಿಷಯ ತಿಳಿಸಿದ್ದು, ಆ ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗದಲ್ಲಿ ಶ್ರೇಯಸ್‌ ಕುಸಿದುಬಿದ್ದಿದ್ದು, ಸದ್ಯ ನಟ ಮುಂಬೈನ ಅಂಧೇರಿಯಲ್ಲಿರುವ ಬೆಲ್ಲೆವ್ಯೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿತ್ರೀಕರಣದಲ್ಲಿ ಆಕ್ಷನ್‌ ಸೀಕ್ವೆನ್ಸ್‌ಗಳಲ್ಲಿ ಭಾಗವಹಿಸಿದ್ದ ತಲ್ಪಾಡೆಗೆ ಹೃದಯಾಘಾತಕ್ಕೊಳಗಾಗಿರುವುದು ಬಾಲಿವುಡ್‌ ಮಂದಿಯಲ್ಲಿ ಆತಂಕವನ್ನುಂಟುಮಾಡಿದೆ. ಶ್ರೇಯಸ್‌ ತಲ್ಪಾಡೆಗೆ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಯುತ್ತಿದೆ. ಇನ್ನು ಶ್ರೇಯಸ್‌ ತಲ್ಪಡೆ ʼಅಜಾಗ್ರತʼ ಎಂಬ ಸೌತ್‌ ಸಿನಿಮಾದಲ್ಲಿಯೂ ಸಹ ನಟಿಸುತ್ತಿದ್ದು, ಈ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!